'ರೈಲು ಪ್ರಯಾಣ ದರ ಇಳಿಸಿ, ಇಲ್ಲ ರಾಜೀನಾಮೆ ಬಿಸಾಕಿ'

ರೈಲ್ವೆ ಬಜೆಟ್ ಮಂಡಿಸುವ ಮುನ್ನ ಕೇಂದ್ರದ ಮಾಜಿ ರೈಲ್ವೆ ಸಚಿವೆ ಮತ್ತು ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರಿಗೆ ತೋರಿಸಿರಲಿಲ್ಲ ಎಂದು ಮಮತಾ ಬೇಸರ ವ್ಯಕ್ತಪಡಿಸಿದ್ದಾರೆ. ರೈಲು ದರ ಏರಿಸುವ ಸಂಗತಿ ತಮ್ಮ ಪಕ್ಷಕ್ಕೇ ಗೊತ್ತಿರಲಿಲ್ಲ ಎಂದು ಅಸಮಾಧಾನ ಮಮತಾ ವ್ಯಕ್ತಪಡಿಸಿದ್ದಾರೆ.
ದಿನೇಶ್ ತ್ರಿವೇದಿಯವರು ಬಜೆಟ್ ಸಿದ್ಧಪಡಿಸುವಾಗ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಅವರ ಸಲಹೆ ಪಡೆದಿದ್ದರು. ಆದರೆ, ಮಮತಾ ಅವರ ಸಲಹೆಗಳನ್ನು ಪಡೆದಿರಲಿಲ್ಲ ಎಂಬ ವಿವಾದ ಉದ್ಭವವಾಗಿದೆ. ಪ್ರಯಾಣ ದರ ಏರಿಸಿರುವುದನ್ನು ಪ್ರಮುಖ ವಿರೋಧ ಪಕ್ಷ ಬಿಜೆಪಿ ಕೂಡ ವಿರೋಧಿಸಿದೆ.
ಉನ್ನತ ಶ್ರೇಣಿಯ ಪ್ರಯಾಣ ದರಗಳನ್ನು ಏರಿಸಿದ್ದರೆ ಒಪ್ಪಬಹುದಿತ್ತು. ಆದರೆ, ಸಾಮಾನ್ಯ ರೈಲು ದರಗಳು ಸೇರಿದಂತೆ ಎಲ್ಲಾ ವಿಭಾಗದಲ್ಲೂ ಏರಿಸಿರುವುದು ಖಂಡಿತ ಸ್ವೀಕಾರ್ಹವಲ್ಲ ಎಂದು ತೃಣಮೂಲ ಕಾಂಗ್ರೆಸ್ ವಕ್ತಾರ ಬಂಡೋಪಾಧ್ಯಾಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದರೆ, ತೃಣಮೂಲ ಕಾಂಗ್ರೆಸ್ ವಾದಕ್ಕೆ ತಿರುಗೇಟು ನೀಡಿರುವ ದಿನೇಶ್ ತ್ರಿವೇದಿ ಅವರು, ರೈಲ್ವೆ ಇಲಾಖೆಯ ಅಭಿವೃದ್ಧಿಗಾಗಿ ಏನೆಲ್ಲ ಮಾಡಬೇಕೋ ಅದನ್ನೆಲ್ಲ ಮಾಡಿದ್ದೇನೆ. ಐ ಡೋಂಟ್ ಕೇರ್ ಎನಿಬಡಿ. ರೈಲ್ವೆ ಕುರ್ಚಿ ಕಳೆದುಕೊಳ್ಳುವ ಅಥವಾ ಉಳಿಸಿಕೊಳ್ಳುವ ಹೆದರಿಕೆ ನನಗಿಲ್ಲ. ಏರ್ ಇಂಡಿಯಾಗೆ ಆದ ದುರ್ಗತಿ ರೈಲ್ವೆ ಇಲಾಖೆಗೆ ಬರುವುದನ್ನು ಇಷ್ಟಪಡುವುದಿಲ್ಲ. ಹಣವಿಲ್ಲದಿದ್ದರೆ ಯಾವುದೇ ರೀತಿಯ ಸುರಕ್ಷತೆಯ ಗ್ಯಾರಂಟಿ ನೀಡುವುದು ಸಾಧ್ಯವಿಲ್ಲ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.












Click it and Unblock the Notifications