ಗಿರಿ ರಾಜ್ಯಕ್ಕೆ ಬಹುಗುಣ ಮುಖ್ಯಮಂತ್ರಿ: ಕಾಂಗ್ರೆಸ್

65ರ ಹರೆಯದ ಬಹುಗುಣರನ್ನು ನೂತನ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಕೂಡಾ ಆಯ್ಕೆ ಮಾಡಲಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಂ ನಬಿ ಅಜಾದ್ ಘೋಷಿಸಿದ್ದಾರೆ.
ಪಕ್ಷದ ಸಂಸದರು ಹಾಗೂ ಶಾಸಕರ ಅಭಿಪ್ರಾಯ ಸಂಗ್ರಹಿಸಿ ಎಐಸಿಸಿ ಅಧ್ಯಕ್ಷ ಸೋನಿಯಾ ಗಾಂಧಿ ಈ ನೇಮಕ ಮಾಡಿದ್ದಾರೆ ಎಂದು ಅಜಾದ್ ಹೇಳಿದರು.
ಅಲಹಾಬಾದ್ ಹಾಗೂ ಬಾಂಬೆ ಹೈಕೋರ್ಟ್‌ಗಳ ನಿವೃತ್ತ ನ್ಯಾಯಾಧೀಶರಾಗಿರುವ ಬಹುಗುಣ
ಉತ್ತರಾಖಂಡ ಕಾಂಗ್ರೆಸ್ ಘಟಕದ ಉಪಾಧ್ಯಕ್ಷರಾಗಿದ್ದು, ತೆಹ್ರಿ ಗರ್‌ವಾಲ್ ಲೋಕಸಭಾ ಕ್ಷೇತ್ರವನ್ನು 2ನೇ ಬಾರಿಗೆ ಪ್ರತಿನಿಧಿಸುತ್ತಿದ್ದಾರೆ.
12 ವರ್ಷಗಳ ಹಿಂದೆ ಉತ್ತರಾಖಂಡ ರಾಜ್ಯ ರಚನೆಯಾಗಿತ್ತು. ಈ ಗಿರಿರಾಜ್ಯಕ್ಕೆ ಬಹುಗುಣ 6ನೇ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.












Click it and Unblock the Notifications