ಯಡಿಯೂರಪ್ಪ ಪ್ರಚಾರಕ್ಕಾಗಿ ಜಾರಕಿಹೊಳಿ ಮೊರೆಹೋದರೇ?
ಬೆಂಗಳೂರು,
ಮಾ.13: ಉಡುಪಿ ಚಿಕ್ಕಮಗಳೂರು ಉಪಚುನಾವಣೆ ಪ್ರಚಾರಕ್ಕಾಗಿ ದಿಲ್ಲಿಯಲ್ಲಿ ಪಕ್ಷದ ವರಿಷ್ಠರ ಮುಂದೆ ಸಚಿವ ಬಾಲಚಂದ್ರ ಜಾರಕಿಹೊಳಿ ಅವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗಾಗಿ ಗೋಗರೆದರೇ? id="toptextpromo">ಯಡಿಯೂರಪ್ಪ
ಅವರಿಂದ ಜಾರಕಿಹೊಳಿ ವಿಮುಖರಾಗಿ ಬಹಳ ಕಾಲವಾಯಿತು. ಆದರೆ ಇದೀಗ, 'ಸದಾನಂದಗೌಡರು ಹೇಳಿರುವಂತೆ ಆರೋಪ ಹೊತ್ತಿರುವುದರಿಂದ ಚುನಾವಣೆ ಪ್ರಚಾರಕ್ಕಾಗಿ ಉಡುಪಿ ಚಿಕ್ಕಮಗಳೂರಿನತ್ತ ತಲೆಹಾಕುವುದಿಲ್ಲ ಎಂದು ಯಡಿಯೂರಪ್ಪ ಘೋಷಿಸಿದ್ದಾರೆ. ಇದು ಪಕ್ಷಕ್ಕೆ ಮಾರಕವಾಗಬಹುದು. ಆದ್ದರಿಂದ ಚುನಾವಣೆ ಪ್ರಚಾರ ಮಾಡದಿದ್ದರೂ ಪಕ್ಷದ ಗೆಲುವಿಗೆ ಶ್ರಮಿಸುವಂತೆ ಅವರ ಮನವೊಲಿಸಬೇಕು' ಎಂದು ವರಿಷ್ಠರಿಗೆ ಜಾರಕಿಹೊಳಿ ಮನವಿ ಮಾಡಿದರು ಎನ್ನಲಾಗಿದೆ. id='are-slot-1' class='oiad oi-axt oiadv'> id='top-searched-articles'>ಕರ್ನಾಟಕದ
ಉಸ್ತುವಾರಿ ಹೊತ್ತಿರುವ ರಾಜ್ಯಸಭೆ ಪ್ರತಿಪಕ್ಷದ ನಾಯಕ ಅರುಣ್ ಜೇಟ್ಲಿ ಮತ್ತು ಧರ್ಮೇಂದ್ರ ಪ್ರಧಾನ್ ಅವರನ್ನು ಸೋಮವಾರ ಅವರು ಭೇಟಿ ಮಾಡಿದ್ದರು. ಆದರೆ ಅನುಕ್ಷಣದ ರಾಜ್ಯ ರಾಜಕೀಯ ಬೆಳವಣಿಗೆಗಳ ಹೊರತಾಗಿಯೂ 'ವರಿಷ್ಠರ ಜತೆ ರಾಜಕೀಯ ಮಾತನಾಡಲಿಲ್ಲ' ಎಂದು ಜಾರಕಿಹೊಳಿ ದಿಲ್ಲಿಯಲ್ಲಿ ಸುದ್ದಿಗಾರರಿಗೆ ಹೇಳಿದ್ದಾರೆ.











Click it and Unblock the Notifications