ಮುಂದೆ ಬಿಜೆಪಿ ಅಧಿಕಾರಕ್ಕೆ ಬರೋದು ಅಷ್ಟಕಷ್ಟ

bjp-finds-difficult-to-come-to-power-in-2014-rss
ಹೊಸದಿಲ್ಲಿ, ಮಾ.12: ಮುಂದಿನ ( 2014) ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಕಷ್ಟಕಷ್ಟ ಎಂದು ಸ್ವಯಂ ರಾಷ್ಟ್ರೀಯ ಸ್ವಯಂ ಸೇವಕ ಸಂಘವೇ ಹೇಳಿದೆ. ಇದಕ್ಕೆ ಹೇತುವಾಗಿರುವುದು ಉತ್ತರ ಪ್ರದೇಶದಲ್ಲಿ ಮೊನ್ನೆಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ನೀರಸ ಸಾಧನೆ.

ನಿರುತ್ತರ: ಕಾಂಗ್ರೆಸಿನ ಮತ್ತೊಂದು ರೂಪವಾಗಿದೆ. ಅದು ಜನರಿಂದ ದೂರ ಸರಿದಿದೆ. ಅಲ್ಲಿ ಕಾರ್ಯಕರ್ತರಿಗಿಂತ ನಾಯಕರ ಸಂಖ್ಯೆಯೇ ದೊಡ್ಡದಿದೆ. ವಿಧಾನಸಭಾ ಚುನಾವಣಾ ಫ‌ಲಿತಾಂಶಗಳು ಒಡ್ಡಿರುವ ಪ್ರಶ್ನೆಗಳಿಗೆ ಉತ್ತರ ನೀಡದ ಹೊರತು ಬಿಜೆಪಿ ಮುಂದಿನ ಲೋಕಸಭೆಯಲ್ಲಿ ಜಯಭೇರಿ ಬಾರಿಸುವುದು ದೂರದ ಮಾತಾದೀತು ಎಂದು ಆರ್‌ಎಸ್‌ಎಸ್‌ ಅಭಿಪ್ರಾಯಪಟ್ಟಿದೆ.

ಇದು ಆರ್‌ಎಸ್‌ಎಸ್‌ ಮುಖವಾಣಿ ಪತ್ರಿಕೆಗಳಾದ ಪಾಂಚಜನ್ಯ ಮತ್ತು ಆರ್ಗನೈಸರ್‌ ಸಂಪಾದಕೀಯಗಳಲ್ಲಿ ವ್ಯಕ್ತವಾಗಿದೆ. 403 ಸದಸ್ಯರ ಉ.ಪ್ರ. ವಿಧಾನಸಭೆಯಲ್ಲಿ ಬಿಜೆಪಿಗೆ ಈ ಬಾರಿ ಕೇವಲ 47 ಸ್ಥಾನಗಳಷ್ಟೇ ಲಭ್ಯವಾಗಿದೆ. ಇದು 2007ರ ಚುನಾವಣೆಯಲ್ಲಿ ದೊರೆತ ಸ್ಥಾನಗಳಿಗಿಂತ 4 ಕಡಿಮೆ.

ಚುನಾವಣಾ ಫ‌ಲಿತಾಂಶಗಳನ್ನು ಪರಾಮರ್ಶಿಸುವಂತೆ ಸಂಘ ಬಿಜೆಪಿಯನ್ನು ಕೇಳಿದೆ. ಉ.ಪ್ರ. ಫ‌ಲಿತಾಂಶಗಳು ಹಲವು ಪ್ರಶ್ನೆಗಳನ್ನು ಒಡ್ಡಿವೆ. ಅವುಗಳಿಗೆ ಸಕಾಲದಲ್ಲಿ ತಕ್ಕ 'ಉತ್ತರ' ಕಂಡುಕೊಳ್ಳಬೇಕು. ಇಲ್ಲವೇ 2014ರ ಸಾರ್ವತ್ರಿಕ ಚುನಾವಣೆ ಬಿಜೆಪಿಗೆ ಅಗ್ನಿಪಥವಾಗಬಹುದು. ಅದನ್ನು ಕ್ರಮಿಸಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದು ಕಷ್ಟವಾಗಿ ಪರಿಣಮಿಸಬಹುದು ಎಂದು ಸಂಘ ಎಚ್ಚರಿಕೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+