ಗೋವಾಗೆ ದೌಡಾಯಿಸಿದ ಯಡ್ಡಿ ನಿಷ್ಠ ಮೂವರು ಸಚಿವರು

ಸಚಿವರುಗಳಾದ ಬಸವರಾಜ್ ಬೊಮ್ಮಾಯಿ, ಉಮೇಶ್ ಕತ್ತಿ ಮತ್ತು ಸಿ ಎಂ ಉದಾಸಿ ಅವರು ಗೋವಾಗೆ ಪ್ರಯಾಣ ಬೆಳೆಸಿದ್ದಾರೆ. ಇದೇ ರವಿವಾರ (ಮಾ 11) ಯಡಿಯೂರಪ್ಪ ಅವರಿಗೆ ಅಭಿನಂದನಾ ಸಮಾರಂಭ ಹುಬ್ಬಳ್ಳಿಯಲ್ಲಿ ಆಯೋಜಿಸಲಾಗಿದ್ದು ಗಡ್ಕರಿ ಅವರನ್ನು ಈ ಸಮಾವೇಶಕ್ಕೆ ಆಹ್ವಾನಿಸಲು ತೆರಳುತ್ತಿದ್ದೇವೆ ಎಂದು ಸಚಿವರು ಹೇಳಿಕೆ ನೀಡಿದ್ದಾರೆ.
ಯಡಿಯೂರಪ್ಪ ಅವರ ಶಕ್ತಿಪ್ರದರ್ಶನದ ಸಮಾವೇಶ ಇದಾಗಲಿದ್ದು ಗಡ್ಕರಿ ಅವರಿಗೆ ಈ ಸಮಾವೇಶ ಮೂಲಕ ಬಿಎಸ್ವೈ ಅವರನ್ನು ಮತ್ತೆ ಸಿಎಂ ಪಟ್ಟಕ್ಕೆ ಕೂರಿಸುವುದು ಯಡ್ಡಿ ಬೆಂಬಲಿಗರ ಒಂದಂಶದ ಕಾರ್ಯಕ್ರಮ ಎನ್ನಲಾಗಿದೆ.
ಮನೋಹರ್ ಪರಿಕ್ಕಾರ್ ಅವರು ಗೋವಾದ ನೂತನ ಸಿಎಂ ಆಗಿ ಪದಗ್ರಹಣ ಮಾಡುವ ಕಾರ್ಯಕ್ರಮದಲ್ಲಿ ನಿತಿನ್ ಗಡ್ಕರಿ ಭಾಗವಹಿಸಿದ್ದಾರೆ.












Click it and Unblock the Notifications