ಪಾದುಕೆಪೂಜೆ ಮಾಡಲು ಸಿಎಂ ಏನು ಭರತ ಚಕ್ರವರ್ತಿಯೇ?

Paduke
ಉಡುಪಿ, ಮಾ 9: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಗರಿಗೆದರಿದೆ. ಪಾದುಕೆ ಇಟ್ಟು ಪೂಜೆ ಮಾಡಲು ಸಿಎಂ ಸದಾನಂದ ಗೌಡ ರಾಮಾಯಣದಲ್ಲಿ ಬರುವ ಭರತ ಚಕ್ರವರ್ತಿಯೇ ಎಂದು ಪೊರೆದೊಡೆಯ ಶ್ರೀಕೃಷ್ಣನ ಊರಿನಲ್ಲಿ ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ವೀರಪ್ಪ ಮೊಯ್ಲಿ ವ್ಯಂಗ್ಯವಾಡಿದ್ದಾರೆ.

ಪಕ್ಷದ ಅಭ್ಯರ್ಥಿಯ ಪರವಾಗಿ ಮತಯಾಚಿಸಿ ಮಾತನಾಡುತ್ತಿದ್ದ ಮೊಯ್ಲಿ, ಬಿಜೆಪಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಂದ ಜನರು ಬೇಸತ್ತಿದ್ದಾರೆ. ಯಡಿಯೂರಪ್ಪ ನಿರಪರಾಧಿಯೇನೂ ಅಲ್ಲ. ಸಿಎಂ ಪಟ್ಟ ಪದತ್ಯಾಗ ಮಾಡಿದ್ದೇನೆ ಎಂದು ಹೇಳಿಕೆ ನೀಡುತ್ತಾರೆ, ಪಟ್ಟ ಪದತ್ಯಾಗ ಮಾಡಲು ಅವರೇನೂ ಶ್ರೀರಾಮಚಂದ್ರ ಪ್ರಭುವೇ ಎಂದು ಲೇವಡಿ ಮಾಡಿದ್ದಾರೆ.

ಈ ಬಾರಿ ನಮ್ಮ ಅಭ್ಯರ್ಥಿ ಜಯಹೊಂದುವ ವಿಶ್ವಾಸವಿದೆ. ಉತ್ತರಪ್ರದೇಶ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಹಿನ್ನಡೆಯಾಗಿರಬಹುದು. ಆದರೆ ಇಲ್ಲಿ ಬಿಜೆಪಿಯ ಒಳಜಗಳದಿಂದ ಅಭಿವೃದ್ದಿ ಕೆಲಸಗಳಿಗೆ ಹಿನ್ನಡೆಯಾಗಿದೆ. ಈ ಬಾರಿ ಮತದಾರರು ಬಿಜೆಪಿಗೆ ಮತ್ತು ಜೆಡಿಎಸ್ ಗೆ ಸರಿಯಾದ ಪಾಠ ಕಲಿಸಬೇಕೆಂದು ಮೊಯ್ಲಿ ಕೇಳಿಕೊಂಡಿದ್ದಾರೆ.

ಸದಾನಂದ ಗೌಡ ಬೈ ಲಕ್ ಮುಖ್ಯಮಂತ್ರಿಯಾಗಿದ್ದಾರೆ. ಸಂಸದರಿಗೆ ಕೇಂದ್ರ ನೀಡುವ ನಾಲ್ಕು ಕೋಟಿ ರೂಪಾಯಿ ಅನುದಾನವನ್ನು ಇನ್ನೂ ಅವರು ಬಳಸಿಕೊಂಡಿಲ್ಲ. ಅವರಿಗೆ ಈಗ ಸಿಎಂ ಖುರ್ಚಿ ಉಳಿಸಿ ಕೊಳ್ಳುವುದೇ ದೊಡ್ಡ ಸಾಧನೆ ಎಂದು ಮೊಯ್ಲಿ ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರ ಮಾಡಲು ಹಿರಿಯ ನಾಯಕರ ದಂಡೇ ಆಗಮಿಸುತ್ತಿದೆ. ಸಿದ್ದರಾಮಯ್ಯ, ಪರಮೇಶ್ವರ್, ಜನಾರ್ಧನಪೂಜಾರಿ ಮುಂತಾದವರು ಪಕ್ಷದ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಪರವಾಗಿ ಮತ ಯಾಚಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+