ಏಳಿಎದ್ದೇಳಿ, ಗಂಡು ಹೆಣ್ಣೆನ್ನದೆ ಬೈಸಿಕಲ್ ತುಳಿಯಿರಿ

Cyclo-thon in Bangalore on March 11, 2012
ಬೆಂಗಳೂರು, ಮಾ. 9 : ಸೈಕಲ್ ಬಳಸುವ ಮುಖಾಂತರ ವಾಯುಮಾಲಿನ್ಯದ ಕುರಿತು ಜಾಗೃತಿ ಹುಟ್ಟಿಸುವ ಮೂಲ ಉದ್ದೇಶದಿಂದ 'ಆಚಾರ್ಯ ಹಬ್ಬ'ದ ಪ್ರಯುಕ್ತ ಆಚಾರ್ಯ ವಿದ್ಯಾಸಂಸ್ಥೆ ಮಾರ್ಚ್ 11, ಭಾನುವಾರ ಬೆಳಿಗ್ಗೆ 6 ಗಂಟೆಗೆ 'ಸೈಕೋ-ಥಾನ್' ಕಾರ್ಯಕ್ರಮವನ್ನು ಆಯೋಜಿಸಿದೆ.

ನಮ್ಮ ಬೆಂಗಳೂರು ವಾಯುಮಾಲಿನ್ಯದಿಂದಾಗಿ ಉಸಿರುಗಟ್ಟಿಸುವಂತಾಗಿದೆ. ದಿನೇದಿನೇ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಸೈಕಲ್ ಬಳಸುವವರ ಸಂಖ್ಯೆ ಬೆರಳೆಣಿಕೆಯಷ್ಟಾಗಿದೆ. ಸೈಕಲ್ ಬಳಸಲು ಆಸಕ್ತಿಯೂ ಕುಂಠಿತವಾಗುತ್ತಿದೆ. ಇಂಥ ಸಂದರ್ಭದಲ್ಲಿ ಸೈಕಲ್ ಬಳಸಲು ಜನರನ್ನು ಉತ್ತೇಜಿಸುವ ಉದ್ದೇಶದಿಂದ ಆಚಾರ್ಯ ಇನ್‌ಸ್ಟಿಟ್ಯೂಟ್‌ನ ವಿದ್ಯಾರ್ಥಿಗಳು ಈ ಹೆಜ್ಜೆಯನ್ನು ಮುಂದಿಟ್ಟಿದ್ದಾರೆ.

ಸೈಕಲ್ ಹೊಡೆಯುವುದು ಪರಿಸರಕ್ಕೆ ಸ್ನೇಹಕರ ಮಾತ್ರವಲ್ಲ ಆರೋಗ್ಯಕ್ಕೂ ಒಳ್ಳೆಯದು. ಶಾಲೆ, ಕಾಲೇಜಿಗೆ ಸೈಕಲ್‌ನಲ್ಲೇ ಹೋಗಿರಿ. ಸೈಕಲ್ ಹೊಡೆಯಿರಿ ಪರಿಸರ ಉಳಿಸಿರಿ ಎಂಬ ಉದಾತ್ತ ಕರೆಯನ್ನು ADVENTURE.INC ಸಾಹಸ ಕ್ಲಬ್ ವಿದ್ಯಾರ್ಥಿಗಳು ನೀಡಿದ್ದಾರೆ. ಸೈಕ್ಲಿಂಗ್ ಬಗ್ಗೆ ಆಸಕ್ತಿಯಿರುವ ಮತ್ತು ಪರಿಸರ ಬಗ್ಗೆ ಕಾಳಜಿಯಿರುವ ಯಾರೇ ಆಗಲಿ ಈ ಅಭಿಯಾನದಲ್ಲಿ ಭಾಗವಹಿಸಬಹುದಾಗಿದೆ.

10 ಕಿ.ಮೀ.ಗಳ ಸೈಕೋ-ಥಾನ್ ಕಂಠೀರವ ಸ್ಟೇಡಿಯಂನಿಂದ ಮಲ್ಲೇಶ್ವರ 18ನೇ ಅಡ್ಡರಸ್ತೆಯವರೆಗೆ ನಡೆಯಲಿದೆ. ಹಡ್ಸನ್ ವೃತ್ತ, ವಿಧಾನಸೌಧ, ರಾಜಭವನ, ಬಿಡಿಎ ಜಂಕ್ಷನ್, ಕಾವೇರಿ ಚಿತ್ರಮಂದಿರ ಮುಖಾಂತರ ಮಲ್ಲೇಶ್ವರ ತಲುಪಲಿದೆ. ಸುಮಾರು 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಒಂದು ತಿಂಗಳಿನಿಂದ ನಡೆಯುತ್ತಿರುವ 'ಆಚಾರ್ಯ ಹಬ್ಬ' ಮಾರ್ಚ್ 15, 16 ಮತ್ತು 17ರಂದು ನಡೆಯಲಿರುವ ಉತ್ಸವದ ಮುಖಾಂತರ ಕೊನೆಗೊಳ್ಳಲಿದೆ.

ಬಾಡಿಗೆ ಸೈಕಲ್ ಬೇಕಿದ್ದರೆ ಸಂಪರ್ಕಿಸಿ : [email protected]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+