ಯಡಿಯೂರಪ್ಪ ಕೊರಳಿಗೆ ಉರುಳು ಹೆಣೆದ NGO

SR Hirmath
ಬೆಂಗಳೂರು, ಮಾ.8: ವಕೀಲ ಎಸ್ ಆರ್ ಹಿರೇಮಠ ಅವರ ನೇತೃತ್ವದ ಎನ್ ಜಿಒ ಸಮಾಜ ಪರಿವರ್ತನ ಸಮುದಾಯದ ಅರ್ಜಿಯನ್ನು ಮನ್ನಿಸಿ ಸುಪ್ರೀಂಕೋರ್ಟ್ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜಿಂದಾಲ್ ಮತ್ತು ಅದಾನಿ ಕಂಪನಿಗಳ ವಿರುದ್ಧ ವಿಶೇಷ ತನಿಖೆ ನಡೆಸುವಂತೆ ತಜ್ಞರ ಉನ್ನತ ಸಮಿತಿಗೆ (ಸಿಇಸಿ) ಆದೇಶಿಸಿದ್ದು ಈಗ ನಿರ್ಣಾಯಕ ಹಂತ ತಲುಪಿದೆ.

ಯಡಿಯೂರಪ್ಪ ಅವರ ರಾಜಕೀಯ ಅಧಃಪತನಕ್ಕೆ ನಾಂದಿ ಹಾಡಬಲ್ಲ ಸಿಇಸಿ ವರದಿ ಆಧಾರದ ಮೇಲೆ ಸುಪ್ರೀಂಕೋರ್ಟ್ ನ ಅರಣ್ಯ ನ್ಯಾಯಪೀಠದ ಮುಖ್ಯ ನ್ಯಾಯಾಧೀಶ ಎಸ್.ಎಚ್ ಕಾಪಾಡಿಯಾ, ಜಸ್ಟೀಸ್ ಅಫ್ತಾಬ್ ಅಲಂ ಹಾಗೂ ಜಸ್ಟೀಸ್ ಸ್ವತಂತ್ರ ಕುಮಾರ್ ಅವರಿದ್ದ ನ್ಯಾಯಪೀಠ ಮಾ.16 ರಂದು ತೀರ್ಪು ನೀಡಲಿದೆ.

NGO Samaj Parivartan Samudaya ಪರ ಸಮರ್ಥವಾಗಿ ವಾದಿಸಿದವರು ಟೀಂ ಅಣ್ಣಾದ ಸದಸ್ಯ ಹಿರಿಯ ವಕೀಲ ಪ್ರಶಾಂತ್ ಭೂಷಣ್.

ಲೋಕಾಯುಕ್ತ ವರದಿಯ ಅನ್ವಯ ಬೇಲೇಕೇರಿ ಬಂದರಿನಿಂದ ಸುಮಾರು 5.5 ಲಕ್ಷ ಟನ್ ಕಬ್ಬಿಣ ಅದಿರು ಮಾಯವಾಗಿರುವುದರ ಹಿಂದೆ ಅದಾನಿ ಸಮೂಹದ ಕೈವಾಡದ ಶಂಕೆ ವ್ಯಕ್ತವಾಗಿದೆ.

22.62.924 ರೂ ನಿಂದ 1.28.37.242 ರೂ ಲಂಚದ ಹಣ ವಿವಿಧ ಅಧಿಕಾರಿಗಳಿಗೆ ಸಂದಾಯವಾಗಿದೆ. ಸುಮಾರು 11,59,441 ಮೆಟ್ರಿಕ್ ಟನ್ ಅದಿರು ಅಕ್ರಮವಾಗಿ ರಫ್ತು ಮಾಡಲು ಅಧಿಕಾರಿಗಳು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ಪ್ರಶಾಂತ್ ದಾಖಲೆ ಸಮೇತ ವಾದಿಸಿದ್ದರು. [ಬೇಲೇಕೇರಿ ಅಕ್ರಮಗಳ ಬಗ್ಗೆ ವರದಿ ನೋಡಿ]

* ಜಿಂದಾಲ್ ಕಂಪನಿಯಿಂದ ಯಡಿಯೂರಪ್ಪನವರ ಕುಟುಂಬದ ಟ್ರಸ್ಟ್‌ಗೆ ಹಣ ಸಂದಾಯವಾಗಿದೆ.
* ಜಿಂದಾಲ್ ಕಂಪನಿಗೆ ಗಾಲಿ ರೆಡ್ಡಿ ಅವರ ಎಎಂಸಿ ಅಕ್ರಮವಾಗಿ ಅದಿರನ್ನು ಸರಬರಾಜು ಮಾಡಿದೆ.
* ಅಕ್ರಮ ರಫ್ತು ಮಾಡಲು ಲಂಚ ನೀಡಿರುವ ಅದಾನಿ ಎಂಟರ್‌ಪ್ರೈಸಸ್ ವಿರುದ್ಧವೂ ಆರೋಪ ದಾಖಲಾಗಿದೆ. ಈ ಮೂರು ಅಂಶಗಳು ಸಾಬೀತಾಗಲು ಅಗತ್ಯ ಸಾಕ್ಷಿಗಳಿದೆ. ಸುಪ್ರೀಂಕೋರ್ಟ್ ಅಂತಿಮ ತೀರ್ಪಿನ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+