ಫ್ಯಾಕ್ಸ್ ವೇಗದಲ್ಲಿ ಖುರ್ಚಿ ಮೇಲೆ ಅರ್ಜಿಯಿಟ್ಟ ಯಡ್ಡಿ

ಕೋರ್ಟ್ ತೀರ್ಪು ಅವರ ಕಿವಿಗೆ ಬೀಳುತ್ತಿದ್ದಂತೆ ಅವರು ಮಾಡಿದ ಮೊದಲ ಕೆಲಸವೆಂದರ - ಕಿರಿಯ ಪುತ್ರ ವಿಜಯೇಂದ್ರಗೆ ಫೋನ್ ಹಚ್ಚಿ. ನೋಡು ಆ ಕೋರ್ಟ್ ಆದೇಶದ ತೀರ್ಪಿನ ಪ್ರತಿ ಪಡೆದು ಸಂಬಂಧಪಟ್ಟವರಿಗೆ ಅಂದರೆ ಅಧಿಕಾರ ವಾಪಸ್ ನೀಡುವುದಾಗಿ ಮಾತು ಕೊಟ್ಟಿದ್ದ ಪಕ್ಷದ ರಾಜ್ಯಾಧ್ಯಕ್ಷ ನಿತಿನ್ ಗಡ್ಕರಿಗೆ ತಕ್ಷಣ ಫ್ಯಾಕ್ಸ್ ಮಾಡಿಬಿಡು - ಎಂದು ಆಜ್ಞಾಪಿಸಿದ್ದಾರೆ.
ಪಿತೃವಾಕ್ಯ ಪರಿಪಾಲಕ ವಿಜಯೇಂದ್ರ ಅಪ್ಪ ಹೇಳಿದ್ದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ದಿಲ್ಲಿಯಲ್ಲಿರುವ ಇದ್ದಬದ್ದ ಎಲ್ಲ ನಾಯಕರಿಗೂ ಕೋರ್ಟ್ ತೀರ್ಪಿನ ಪ್ರತಿಯನ್ನು ಫ್ಯಾಕ್ಸ್ ಮಾಡಿ, ಅಪ್ಪಾ, done ಅಂದಿದ್ದಾರೆ.
ಅಷ್ಟಕ್ಕೇ ತೃಪ್ತರಾಗದ ಸನ್ಮಾನ್ಯ ಯಡಿಯೂರಪ್ಪನವರು ಗಡ್ಕರಿಗೆ ಫೋನ್ ಮಾಡಿ, 'ನೋಡಿ ನೀವು ಯಾವ ವೇಗದಲ್ಲಿ ನನ್ನಿಂದ ಸಿಎಂ ಖುರ್ಚಿ ಕಿತ್ತುಕೊಮಡಿರಿ ಅದೇ ವೇಗದಲ್ಲಿ ಅದನ್ನು ವಾಪಸ್ಸು ಮಾಡ್ಬಿಡಿ' ಎಂದು ಗುಟುರು ಹಾಕಿದ್ದಾರೆ. ಅದೇ ಉಸುರಿನಲ್ಲಿ ನೋಡಿ ಅಲ್ಲಿ ಉತ್ತರ ಪ್ರದೇಶದಲ್ಲಿ ಚುನಾವಣೆಯೂ ಮುಗೀತಲ್ಲ. ಇನ್ನೇನು ಆಗ್ಬೇಕು ನಿಮಗೆ. ತಕ್ಷಣ ನನಗೆ ಸಿಎಂ ಕುರ್ಚಿ ನೀಡಿ' ಎಂದು ಹೇಳಿದ್ದಾರೆ.
ಡಿವಿಎಸ್ ಸ್ಥಾನ ತ್ಯಜಿಸಲಿ: ಯಡಿಯೂರಪ್ಪ ಅವರು ತಮ್ಮ ಆಪ್ತರ ಬಳಿ ಮಾತನಾಡುತ್ತಾ, 'ಇನ್ನಾದರೂ ಅವಯ್ಯ ಮುಖ್ಯಮಂತ್ರಿ ಸ್ಥಾನ ತ್ಯಜಿಸಬೇಕು. ಮುಖ್ಯಮಂತ್ರಿಯಾಗುವ ಸಂದರ್ಭದಲ್ಲಿ ಮುನ್ನ ಅವರು ಕೊಟ್ಟಿದ್ದ ವಚನ ಪಾಲಿಸಬೇಕು ಎಂದಿದ್ದಾರೆ' ಎಂದೂ ಹೇಳಿದ್ದಾರೆ.












Click it and Unblock the Notifications