ನಗರೇಶ್ವರನಿಗೆ ಕುಂಭಾಭಿಷೇಕ, ಯಡ್ಡಿಗೆ ಪಟ್ಟಾಭಿಷೇಕ

BS Yeddyurappa
ಬೆಂಗಳೂರು, ಮಾ.7:ತುಮಕೂರಿನಲ್ಲಿ ಸಿದ್ದಗಂಗಾ ಶ್ರೀಗಳ ಹುಟ್ಟುಹಬ್ಬ(ಏ.1 ರಂದು)ದ ಆಯೋಜನೆ ಬಗ್ಗೆ ಚರ್ಚಿಸಿ ಬೆಂಗಳೂರಿಗೆ ಬಂದ ಯಡಿಯೂರಪ್ಪ ಬಳಗ ನೇರ ದೇಗುಲಗಳಿಗೆ ಭೇಟಿ ನೀಡುತ್ತಿದೆ.

ನಗರ್ತಪೇಟೆಯಲ್ಲಿರುವ ನಗರೇಶ್ವರ ದೇಗುಲಕ್ಕೆ ತೆರಳಿ ಕುಂಭಾಭಿಷೇಕದಲ್ಲಿ ಭಾಗವಹಿಸಿದ ಯಡಿಯೂರಪ್ಪ ಅವರು ವಿಶಷ್ಟ ರೀತಿಯಲ್ಲಿ ಹಣೆಪಟ್ಟಿ ಧರಿಸಿ ಹೋಮಕ್ಕೆ ಪೂರ್ಣಾಹುತಿ ಅರ್ಪಿಸಿ, ಭಕ್ತಿಯಿಂದ ಪ್ರಾರ್ಥಿಸಿದರು.

ರೇಣುಕಾಚಾರ್ಯ ಸೇರಿದಂತೆ ಯಡಿಯೂರಪ್ಪ ಅವರ ಆಪ್ತರು ನಾಡಿನ ಪ್ರಮುಖ ದೇಗುಲಗಳಲ್ಲಿ ಯಡಿಯೂರಪ್ಪ ಅವರು ಮತ್ತೆ ಸಿಎಂ ಆಗಲಿ ಎಂದು ಹರಕೆ ಹೊತ್ತಿದ್ದಾರೆ. ಹೀಗಾಗಿ ಯಡಿಯೂರಪ್ಪ ಅವರು ಇನ್ಮುಂದೆ ದೇಗುಲಗಳ ಭೇಟಿಯಲ್ಲಿ ನಿರತರಾಗಿದ್ದಾರೆ.

ನ್ಯಾಯಾಲಯಕ್ಕೆ ಯಾವತ್ತು ತಲೆ ಬಾಗುವಂಥ ವ್ಯಕ್ತಿ, ತೀರ್ಪಿಗೆ ತಲೆ ಬಾಗುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಈ ನಡುವೆ ಯಡಿಯೂರಪ್ಪ ಅವರ ಹುಟ್ಟೂರು ಬೂಕನಕೆರೆಯಲ್ಲಿ ಹರ್ಷೋದ್ಘಾರ ಮುಗಿಲುಮುಟ್ಟಿದೆ.

ಮಾ.14ರಂದು ಹುಬ್ಬಳ್ಳಿಯಲ್ಲಿ ಶಕ್ತಿ ಪ್ರದರ್ಶನದ ಬದಲು ಯಡಿಯೂರಪ್ಪ ಅವರ ಅಭಿನಂದನೆ ಕಾರ್ಯಕ್ರಮವಾಗಿ ಪರಿವರ್ತಿಸಲು ಯಡಿಯೂರಪ್ಪ ಬೆಂಬಲಿಗರು ನಿರ್ಧರಿಸಿದ್ದಾರೆ. ಆದರೆ, ಕಾರ್ಯಕ್ರಮದ ಸ್ವರೂಪ ಹೈಕಮಾಂಡ್ ನೀಡುವ ಆದೇಶದ ಮೇಲೆ ನಿರ್ಧಾರವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+