ಯಡ್ಡಿಗೆ ಕ್ಲೀನ್ ಚಿಟ್, ಸಿಎಂ ಪಟ್ಟ ಗ್ಯಾರಂಟಿ

ಆರೋಪಗಳಿಂದ ಮುಕ್ತರಾದ ತಕ್ಷಣ ಸಿಎಂ ಕುರ್ಚಿ ನೀಡುವುದಾಗಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ಅವರು ಭರವಸೆ ನೀಡಿದ್ದರು. ಇತ್ತೀಚೆಗೆ ಅತ್ತಿಬೆಲೆ ಸಮೀಪ ನಡೆದ ಚಿಂತನ ಮಂಥನ ಸಭೆ ನಂತರವೂ ಇದೇ ಮಾತುಗಳನ್ನು ಗಡ್ಕರಿ ಹೇಳಿದ್ದರು.
ಈಗ ಯಡಿಯೂರಪ್ಪ ಅವರಿಗೆ ಹೈಕೋರ್ಟ್ ಕ್ಲೀನ್ ಚಿಟ್ ನೀಡಿದೆ. ಅವರಿಗೆ ಸಿಎಂ ಪಟ್ಟ ನೀಡಿ ಗಡ್ಕರಿ ಅವರು ಕೊಟ್ಟ ಮಾತು ಉಳಿಸಿಕೊಳ್ಳಬೇಕು. ಈ ಬಗ್ಗೆ ಶೀಘ್ರದಲ್ಲೇ ಹೈಕಮಾಂಡ್ ಬಳಿ ಪ್ರಸ್ತಾಪ ಸಲ್ಲಿಸಲಾಗುವುದು, ಯಡಿಯೂರಪ್ಪ ಅವರ ಸೂಚನೆ ಮೇರೆಗೆ ದೆಹಲಿಗೆ ತೆರಳುತ್ತೇವೆ ಎಂದು ಎಂದು ಅಬಕಾರಿ ಸಚಿವ ರೇಣುಕಾಚಾರ್ಯ ಹೇಳಿದ್ದಾರೆ.
'ಯಡಿಯೂರಪ್ಪ ನಿಂತ ನೀರಲ್ಲ. ಹರಿಯುವ ಶಕ್ತಿ. ಎಲ್ಲಾ ಕಳಂಕದಿಂದ ಮುಕ್ತರಾಗುತ್ತಾರೆ' ಎಂಬ ನಿರೀಕ್ಷೆ ಫಲಿಸಿದೆ ಎಂದು ವಿ ಸೋಮಣ್ಣ ಪ್ರತಿಕ್ರಿಯಿಸಿದ್ದಾರೆ.












Click it and Unblock the Notifications