ಬಿಎಸ್ ವೈ ವಿರುದ್ಧದ ಲೋಕಾಯುಕ್ತ FIR ರದ್ದು
ಬೆಂಗಳೂರು,
ಮಾ.7: ಅಕ್ರಮ ಗಣಿಗಾರಿಕೆ ಆರೋಪ ಹೊತ್ತಿರುವ ಬಿಎಸ್ ಯಡಿಯೂರಪ್ಪ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿದ್ದ ಎಫ್ ಐಆರ್ ರದ್ದುಗೊಳಿಸುವಂತೆ ಹೈಕೋರ್ಟ್ ವಿಭಾಗೀಯ ಪೀಠ ಬುಧವಾರ(ಮಾ.7) ಬೆಳಗ್ಗೆ ಆದೇಶಿಸಿದೆ. id="toptextpromo">ಅಕ್ರಮ
ಗಣಿಗಾರಿಕೆಯಲ್ಲಿ ಯಡಿಯೂರಪ್ಪ ಅವರ ಪಾತ್ರವಿಲ್ಲ. ಲೋಕಾಯುಕ್ತ ಸಂಸ್ಥೆ 2011 ಜುಲೈ ತಿಂಗಳಿನಲ್ಲಿ ನೀಡಿದ್ದ ವರದಿಯಲ್ಲಿ ಯಡಿಯೂರಪ್ಪ ಮೇಲೆ ಮಾಡಿರುವ ಆರೋಪಗಳೆಲ್ಲ ಸತ್ಯಕ್ಕೆ ದೂರವಾಗಿದೆ. id='are-slot-1' class='oiad oi-axt oiadv'> id='top-searched-articles'>ಲೋಕಾಯುಕ್ತ
ವರದಿ ಆಧಾರಿಸಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ತನಿಖೆ ನಡೆಸುವಂತೆ ಸೂಚಿಸಿದ್ದರು. ಸೌತ್ ವೆಸ್ಟ್ ಕಂಪನಿಗೆ ಗಣಿ ಗುತ್ತಿಗೆ ನೀಡುವ ಮೂಲಕ ಪ್ರೇರಣಾ ಟ್ರಸ್ಟ್ 20 ಕೋಟಿ ಕಿಕ್ ಬ್ಯಾಕ್ ಪಡೆದ ಆರೋಪ ಹೊರೆಸಲಾಗಿತ್ತು. ಹೈಕೋರ್ಟ್ ಆದೇಶದಿಂದ ಯಡಿಯೂರಪ್ಪ ಅವರಿಗೆ ಬಹುದೊಡ್ಡ ರಿಲೀಫ್ ಸಿಕ್ಕಿದ್ದು, ಗಣಿ ಆರೋಪಗಳಿಂದ ಮುಕ್ತರಾಗಿದ್ದಾರೆ.











Click it and Unblock the Notifications