ಯಡಿಯೂರಪ್ಪಗೆ ಫಲಿಸಿತೇ ಮಾಣಿಕೇಶ್ವರಿ ಆಶೀರ್ವಾದ

ಹೌದು, ತೀರಾ ಅಪರೂಪವಾಗಿ ಮಾಣಿಕೇಶ್ವರಿ ದೇವಿಯು, ಶಂಕರ ಬಿದರಿ ಜತೆಗೂಡಿ ಬಂದಿದ್ದ ಯಡಿಯೂರಪ್ಪಗೆ ಫೆ. 5ರಂದು ದರುಶನ ಭಾಗ್ಯ ನೀಡಿದ್ದರು. ಇದೀಗ ದೇವಿಯ ಆಶೀರ್ವಾದ ಫಲ ನೀಡುವ ಭಾಗ್ಯವೂ ಒದಗಿಬಂದಂತಿದೆ.
ಆದರೆ ಅಧಿಕಾರ ಕಳೆದುಕೊಂಡ ಸಂಕಟದಲ್ಲಿ ಬೇಯುತ್ತಿದ್ದ ಯಡಿಯೂರಪ್ಪ ಒಂದಷ್ಟು ದುಷ್ಟ ಬುದ್ಧಿಯನ್ನು ಮೈಗೂಡಿಸಿಕೊಂಡಿದ್ದರು ಎಂದರೆ ತಪ್ಪಿಲ್ಲ. ಆದರೆ ಇದರ ಸಳಿವು ಪಡೆದಿದ್ದ ಮಾಣಿಕೇಶ್ವರಿ ದೇವಿಯು ಯಾವುದೇ ಮುಲಾಜಿಲ್ಲದೆ 'ದುಷ್ಟ ಬುದ್ಧಿಯ ಬಿಡು' ಎಂದು ಹೇಳಿದ್ದರು. ಇದೀಗ ಯಡಿಯೂರಪ್ಪ ಆ ದುಷ್ಟಬುದ್ಧಿಯನ್ನು ಸ್ವಲ್ಪವಾದರೂ ಬಿಟ್ಟರೆ ಅಧಿಕಾರಕ್ಕೆ ಇನ್ನು ಮೂರೇ ಗೇಣು.
ಹೈಕೋರ್ಟಿನ ಕ್ಲೀನ್ ಚಿಟ್ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಯಡಿಯೂರಪ್ಪ 'ನ್ಯಾಯಾಲಯ ನ್ಯಾಯ ಒದಗಿಸಿಕೊಟ್ಟಿದೆ. ಹೈಕಮಾಂಡ್ ಸಹ ನ್ಯಾಯ ಒದಗಿಸಿಕೊಡುವ ವಿಶ್ವಾಸ ಇದೆ. ಹೈಕಮಾಂಡ್ ಶೀಘ್ರ ನಿರ್ಧಾರ ತೆಗೆದುಕೊಳ್ಳಲಿ' ಎಂದು ಸಿಎಂ ಪಟ್ಟ ತನಗೆ ಮರಳಿಸಿ ಎಂಬ ಪುರಾತನ ಬೇಡಿಕೆಯನ್ನು ಜೀವಂತವಾಗಿಟ್ಟಿದ್ದಾರೆ.












Click it and Unblock the Notifications