ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈಗಲೂ ಲೋಕಾಯುಕ್ತ ವರದಿಗೆ ಬದ್ಧ: ಸಂತೋಷ್ ಹೆಗ್ಡೆ

By Mahesh
|
Google Oneindia Kannada News

Santosh Hegde
ಬೆಂಗಳೂರು, ಮಾ.7: ಅಕ್ರಮ ಗಣಿಗಾರಿಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ದಾಖಲಾಗಿದ್ದ ಎಫ್ ಐಆರ್ ರದ್ದುಗೊಳಿಸಲು ಹೈಕೋರ್ಟ್ ನ್ಯಾಯಪೀಠಕ್ಕೆ ಬಲವಾದ ಕಾರಣ ಸಿಕ್ಕಿರಬಹುದು ಎಂದು ನಿಕಟಪೂರ್ವ ಲೋಕಾಯುಕ್ತ ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ.

ಆದರೆ, ಅಕ್ರಮ ಗಣಿಗಾರಿಕೆ ಕುರಿತು ಲೋಕಾಯುಕ್ತ ಸಂಸ್ಥೆ ನೀಡಿದ ಎರಡನೇ ವರದಿಗೆ ನಾನು ಈಗಲೂ ಬದ್ಧನಾಗಿದ್ದೇನೆ. ಯಡಿಯೂರಪ್ಪ ಮತ್ತು ಅವರ ಕುಟುಂಬ ಮೈನಿಂಗ್ ಕಂಪನಿಗಳಿಂದ ಅಕ್ರಮವಾಗಿ ಹಣ ಪಡೆದಿರುವುದು ಸತ್ಯ ಎಂದು ಸಂತೋಷ್ ಹೆಗ್ಡೆ ಹೇಳಿದ್ದಾರೆ.

ಒಂದು ಮೈನಿಂಗ್ ಕಂಪನಿ ಶಿವಮೊಗ್ಗದಲ್ಲಿರುವ ಯಡಿಯೂರಪ್ಪ ಅವರ ಕುಟುಂಬದ ಪ್ರೇರಣಾ ಟ್ರಸ್ಟ್ ಗೆ 10 ಕೋಟಿ ರು ದಾನ ಮಾಡಿದೆ. ಯಡಿಯೂರಪ್ಪ ಅಳಿಯಂದಿರಿಂದ ರಾಚೇನಹಳ್ಳಿಯಲ್ಲಿ ಡಿ ನೋಟಿಫಿಕೇಷನ್ ಆದ ಭೂಮಿಯನ್ನು ಅದೇ ಕಂಪನಿ 20 ಕೋಟಿ ರು ಕೊಟ್ಟು ಖರೀದಿಸಿದೆ.

ಸಾಕ್ಷ್ಯಾಧಾರಗಳ ಕೊರತೆ: ನ್ಯಾಯಾಲಯಕ್ಕೆ ಸೂಕ್ತ ದಾಖಲೆಗಳು ಸಿಕ್ಕಿಲ್ಲ ಎನ್ನುವುದನ್ನು ನಾನು ಒಪ್ಪುವುದಿಲ್ಲ. ಚೆಕ್ ರೂಪದಲ್ಲಿ ದಾನ ನೀಡಿರುವುದನ್ನು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

ಹೈಕೋರ್ಟ್ ನೀಡಿರುವ ವರದಿಯ ತಪ್ಪು ಒಪ್ಪುಗಳನ್ನು ಮೇಲಿನ ಕೋರ್ಟ್ ನಿರ್ಧರಿಸಲಿ. ಲೋಕಾಯುಕ್ತ ವರದಿ ಅಂಶಗಳನ್ನು ಜನತಾ ನ್ಯಾಯಾಲಯದ ವಿವೇಚನೆಗೆ ಬಿಟ್ಟಿದ್ದೇನೆ. ಆದರೆ, 25 ಸಾವಿರ ಪುಟಗಳ ಗಣಿ ಅಕ್ರಮ ವರದಿಯನ್ನು ಸರ್ಕಾರ ಇನ್ನೂ ಸ್ವೀಕರಿಸದಿರುವುದು ಬೇಸರ ತರಿಸಿದೆ ಎಂದು ನ್ಯಾ. ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟರು.

English summary
There must be strong reasons behind HC verdict on giving cleanchit to BS Yeddyurappa. But I still go by Lokayukta report and hope that justice will be prevailed said former Lokayukta N Santosh Hegde.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X