ಯುಪಿ ಕಾಂಗ್ರೆಸ್ ಹಿನ್ನಡೆ: ಚಿಕ್ಕಮಗಳೂರಿನಲ್ಲೂ ಕಂಪನ
ಬೆಂಗಳೂರು,
ಮಾ.6: ಉತ್ತರ ಭಾರತದಲ್ಲಿ ಬೀಸುತ್ತಿರುವ ಬಲವಾದ ಚುನಾವಣೆ ಗಾಳಿ ದಕ್ಷಿಣದ ಉಡುಪಿಗೂ ತಾಕುವ ಲಕ್ಷಣಗಳು ದಟ್ಟವಾಗಿವೆ. ಅತ್ತ ಉತ್ತರಪ್ರದೇಶದಲ್ಲಿ ಒಬ್ಬ ಯುವರಾಜ ಮಣ್ಣುಮುಕ್ಕುತ್ತಿರುವ ಸಂದರ್ಭದಲ್ಲಿ ಅದರ ಕಂಪನಗಳು ಉಡುಪಿ ಚಿಕ್ಕಮಗಳೂರುವರೆಗೂ ಅನುಭವಕ್ಕೆ ಬರುತ್ತಿವೆ. ದಿಕ್ಸೂಚಿಯಂತಿದ್ದ ಯುಪಿ ಮತ್ತು ಗೋವಾದಲ್ಲಿ ಕಾಂಗ್ರೆಸ್ ಗೆ ತೀವ್ರ ಮುಖಭಂಗವಾಗಿದೆ. id="toptextpromo">ಅಧಿನೇತಾರರಾದ
ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಖುದ್ದು ಅಮೇಥಿ ಮತ್ತು ರಾಯ್ ಬರೇಲಿಗಳಲ್ಲಿ ನೆಲಕಚ್ಚಿರುವುದು ಕಾಂಗ್ರೆಸ್ ಗೆ ದಿಕ್ಕುತೋಚದಂತಾಗಿದೆ. ಇನ್ನು ಒಂದು ದಶಕದಿಂದ ಸಂಪೂರ್ಣವಾಗಿ ನಿದ್ರಿಸುತ್ತಿರುವ ಕರ್ನಾಟಕ ಕಾಂಗ್ರೆಸ್ ಗೆ ಮತ್ತಷ್ಟು ಮೆತ್ತನೆ ಹಾಸಿಗೆ ಹಾಸಿಕೊಟ್ಟಂತಾಗಿದೆ. id='are-slot-1' class='oiad oi-axt oiadv'> id='top-searched-articles'>ಹಾಗೆ
ನೋಡಿದರೆ ಚಿಕ್ಕಮಗಳೂರು ಕ್ಷೇತ್ರ ಇಂದಿರಾ ಗಾಂಧಿ ಕಾಲದಿಂದಲೂ ಕಾಂಗ್ರೆಸ್ಸಿಗೆ ಪ್ರತಿಷ್ಠೆಯ ಕಣ. ಹಾಗಾಗಿ, ಉತ್ತರಪ್ರದೇಶದಲ್ಲಿ ರಾಹುಲ್ ಮೋಡಿ ಮಾಡುತ್ತಾರೆ. ಅದು ಇಲ್ಲೂ ವರ್ಕ್ ಔಟ್ ಆಗುತ್ತದೆ ಎಂಬ ಎಣಿಕೆಯಲ್ಲಿದ್ದ ರಾಜ್ಯ ಕಾಂಗ್ರೆಸ್ ಮಂದಿಗೆ ಭಾರಿ ನಿರಾಸೆಯಾಗಿದೆ. ಆಡಳಿತಾರೂಢ ಬಿಜೆಪಿಗೆ ಉತ್ತರದ ಹವಾ ಹಿತಕರವಾಗಿ ಪರಿಣಮಿಸಿದೆ.











Click it and Unblock the Notifications