ಚುನಾವಣೆ: ಜೆಡಿಎಸ್ಗೆ ಸಿಪಿಐ ಬೆಂಬಲ ಸಿಕ್ರೆ ಬಂಪರ್

CPM may support to JDS
ಚಿಕ್ಕಮಗಳೂರು, ಮಾ.5: ಕಳೆದ ಬಾರಿ ಜೆಡಿಎಸ್ ನೀಡಿದ ಬೆಂಬಲದ ಋಣ ತೀರಿಸಲು ಎಡಪಕ್ಷಗಳು ಮುಂದಾಗಿದೆ. ಈ ಬಾರಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಉಪ ಚುನಾವಣೆಯಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು ಸಿಪಿಐ ನಿರ್ಧರಿಸಿದೆ ಎಂದು ಪಕ್ಷದ ಕಾರ್ಯದರ್ಶಿ ಪಿವಿ ಲೋಕೇಶ್ ಹೇಳಿದ್ದಾರೆ.

ಜಾತ್ಯಾತೀತ ಮತಗಳು ಹಂಚಿಕೆಯಾಗಬಾರದು ಎಂದು ಸಿಪಿಐ ಹಿಂದೆ ಸರಿದಿದೆ. 2009ರ ಚುನಾವಣೆಯಲ್ಲಿ ಸಿಪಿಎಂ ಹಾಗೂ ಜೆಡಿಎಸ್ ಬೆಂಬಲದ ಅಭ್ಯರ್ಥಿ 24,991 ಮತಗಳ ಗಳಿಸಿದ್ದರು. ಬಿಜೆಪಿ ಅಭ್ಯರ್ಥಿ ಸದಾನಂದ ಗೌಡ ಅವರು ಜಯಪ್ರಕಾಶ್ ಹೆಗ್ಡೆ ವಿರುದ್ಧ 27,000 ಮತಗಳ ಅಂತರದಿಂದ ಜಯಗಳಿಸಿದ್ದರು.

110 ಸ್ಥಾನ ಗಳಿಸಿದ ಬಿಜೆಪಿ ಸರ್ಕಾರ ರಚಿಸಿದರು ಭ್ರಷ್ಟಾಚಾರ ಆರೋಪ ಹೊತ್ತು ಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮೆ ನೀಡಬೇಕಾಯಿತು.

ಆದರೆ, ನಂತರ ಶಾಸಕರೊಬ್ಬರನ್ನು ಮುಖ್ಯಮಂತ್ರಿ ಮಾಡದೆ ಸಂಸದ ಸದಾನಂದ ಗೌಡರನ್ನು ಸಿಎಂ ಸ್ಥಾನಕ್ಕೆ ಆಯ್ಕೆ ಮಾಡಿ ಬಿಜೆಪಿ ತಪ್ಪು ನಿರ್ಧಾರ ಕೈಗೊಂಡಿತು. ಇದರಿಂದ ಅನಗತ್ಯ ಚುನಾವಣೆ ಎದುರಿಸಬೇಕಾಗಿದೆ. ಅನಗತ್ಯ ಖರ್ಚು ಭರಿಸುವವರು ಯಾರು ಎಂದು ಸಿಪಿಎಂ ಪ್ರಶ್ನಿಸಿದೆ.

ಕರ್ನಾಟಕದಲ್ಲಿ ಉಪ ಚುನಾವಣೆಗಳು ಕೇವಲ ಪ್ರತಿಷ್ಠೆ ಕಣಗಳಾಗಿ ಪರಿವರ್ತನೆಯಾಗುತ್ತಿದೆ. ಈ ಚುನಾವಣೆಯಿಂದ ರಾಜ್ಯ ಸರ್ಕಾರಕ್ಕಾಗಲಿ, ಕೇಂದ್ರ ಸರ್ಕಾರಕ್ಕಾಗಲಿ ಯಾವುದೇ ಧಕ್ಕೆಯಾಗುವುದಿಲ್ಲ.

ಜೆಡಿಎಸ್ ಗೆ ಸಂಪೂರ್ಣ ಬೆಂಬಲ ನೀಡುವ ಬಗ್ಗೆ ನಮ್ಮ ರಾಷ್ಟ್ರೀಯ ನಾಯಕರೊಡನೆ ಚರ್ಚಿಸಿ, ನಿರ್ಧರಿಸಲಾಗುವುದು ಎಂದು ಪಿವಿ ಲೋಕೇಶ್ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+