ಜಗನ್ ಬಂಧನಕ್ಕೆ ಸಿಬಿಐ ರಿಹರ್ಸಲ್
ಹೈದರಾಬಾದ್,
ಮಾ.5: ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಸಿಲುಕಿರುವ ವೈಎಸ್ಆರ್ ಕಾಂಗ್ರೆಸ್ ಅಧಿನಾಯಕ ಜಗನ್ ಮೋಹನ್ ರೆಡ್ಡಿ ಬಂಧನಕ್ಕೆ ಸಿಬಿಐಗೆ ಇನ್ನು ಒಂದೇ ಹೆಜ್ಜೆ ಬಾಕಿಯಿದೆ. ಶನಿವಾರ ಮತ್ತು ಭಾನುವಾರವಿಡೀ ಸಿಬಿಐ ಅಧಿಕಾರಿಗಳು ಜಗನ್ ಚಲನವಲನಗಳ ಮೇಲೆ ನಿಗಾಯಿಟ್ಟಿದ್ದು, ಅವರನ್ನು ಬಂಧಿಸುವಷ್ಟು ಸನಿಹಕ್ಕೆ ಹೋಗಿದ್ದರು. ಆದರೆ ಕೊನೆಯ ಗಳಿಗೆಯಲ್ಲಿ ಹೆಜ್ಜೆ ವಾಪಸಿಟ್ಟಿದ್ದಾರೆ. ಸಿಬಿಐಗೆ ಜಾರಿ ನಿರ್ದೇಶನಾಲಯವೂ ಸಾಥ್ ನೀಡಿತ್ತು. id="toptextpromo">ಜಗನ್
ಶನಿವಾರ ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಅವರ ಬಂಧನಕ್ಕೆ ಆಗಮಿಸಿದ್ದ ಅಧಿಕಾರಿಗಳು ಸುತ್ತಮುತ್ತ ಠಳಾಯಿಸುತ್ತಿದ್ದರು ಎಂದು ಜಗನ್ ಆಪ್ತರು ಶಂಕಿಸಿದ್ದಾರೆ. ಜಗನ್, ಓದಾರ್ಪು ಯಾತ್ರೆ ಮುಗಿಸಿಕೊಂಡು ವಿಶಾಖಪಟ್ಟಣಂನಿಂದ ವಾಪಸಾಗಿದ್ದರು. id='are-slot-1' class='oiad oi-axt oiadv'> id='top-searched-articles'>ಇಷ್ಟಕ್ಕೂ
CBI ಮತ್ತು ED ಅಧಿಕಾರಿಗಳು ಕೊನೆಯ ಕ್ಷಣದಲ್ಲಿ ಜಗನ್ ಬಂಧನಕ್ಕೆ ಏಕೆ ಮುಂದಾಗಲಿಲ್ಲವೆಂದರೆ ದಿಲ್ಲಿ ಅಧಿಕಾರಿಗಳು ಕೊನೆಗಳಿಗೆಯಲ್ಲಿ ಹಸಿರು ನಿಶಾನೆ ವಾಪಸ್ ತೆಗೆದುಕೊಂಡಿದ್ದೇ ಕಾರಣವೆನ್ನಲಾಗಿದೆ. ಈ ಮಧ್ಯೆ, ಜಗನ್ ವಿರುದ್ಧ ಸಿಬಿಐ ತನ್ನ ತನಿಖೆಯನ್ನು ಬಹುತೇಕ ಪೂರ್ಣಗೊಳಿಸಿದೆ.











Click it and Unblock the Notifications