ರೆಡ್ಡಿಗೆ ಜೈಲುವಾಸ ದೀರ್ಘಕಾಲ ಕಟ್ಟಿಟ್ಟಬುತ್ತಿ

cbi-not-to-arrest-reddy-wife-aruna-muniyappa
ಬೆಂಗಳೂರು, ಮಾ.4: ಎಂಎಂಸಿ ಅಕ್ರಮ ಗಣಿಗಾರಿಕೆ ಸಂಬಂಧ ಪ್ರಧಾನ ಆರೋಪಿ ಮಾಜಿ ಸಚಿವ ಜನಾರ್ದನ ರೆಡ್ಡಿ ಸೇರಿದಂತೆ ಲಕ್ಷ್ಮಿ ಅರುಣಾ, ಮಾಜಿ ಗಣಿ ಮಂತ್ರಿ ಶಿಡ್ಲಘಟ್ಟದ ವಿ. ಮುನಿಯಪ್ಪ, ಶಾಂತಾ ಲಕ್ಷ್ಮಿ ಜಯರಾಂ, ಎಂಎಂಸಿ ಕಂಪನಿಯ ಹಿಂದಿನ ಪಾಲುದಾರರಾದ ಕೆಎಂ ಮಾರ್ವತಮ್ಮ, ಆಕೆಯ ಮಗ ಕೆಎಂ ವಿಶ್ವನಾಥ್, ಐಎಎಸ್ ಶಿವಲಿಂಗಮೂರ್ತಿ ಎಂಇ, ಐಎಫ್ಎಸ್ ಎಸ್ ಮುತ್ತಯ್ಯ ವಿರುದ್ಧ FIR ದಾಖಲಿಸಿರುವುದು ಸರಿಯಷ್ಟೇ.

ಆದರೆ ಸಿಬಿಐ ಸದ್ಯಕ್ಕೆ ಇವರನ್ನೇ ಬಂಡವಾಳ ಮಾಡಿಕೊಂಡು ಜನಾ ರೆಡ್ಡಿಗೆ ಇನ್ನೂ ಒಂದಷ್ಟು ಕಾಲ ಜೈಲುವಾಸ ಮುಂದುವರಿಸುವ ಆಲೋಚನೆಯಲ್ಲಿದೆ. ಪ್ರಕರಣದಲ್ಲಿ ಉಳಿದ ಈ 7 ಮಂದಿಯೂ ಪ್ರಮುಖ, ಗುರುತರ ಆರೋಪಗಳನ್ನು ಹೊತ್ತಿದ್ದರೂ ರೆಡ್ಡಿ ಪತ್ನಿ ಲಕ್ಷ್ಮಿ ಅರುಣಾ ಅವರನ್ನೂ ಸೇರಿದಂತೆ ಸದ್ಯಕ್ಕೆ ಯಾರನ್ನೂ ಬಂಧಿಸುವ ಗೋಜಿಗೆ ಹೋಗುತ್ತಿಲ್ಲ.

Delay Tactics:
ಇದಕ್ಕೆ ಹೇತುವಾಗಿರುವುದು ಹೈದರಾಬಾದ್ ಸಿಬಿಐ ಜಂಟಿ ನಿರ್ದೇಶಕ ವಿವಿ ಲಕ್ಷ್ಮಿನಾರಾಯಣ ಅವರ ಕಾರ್ಯನೀತಿ. ಖಡಕ್ ಅಧಿಕಾರಿ ಲಕ್ಷ್ಮಿನಾರಾಯಣ ಸಹ ಪ್ರಕರಣದ ಆರೋಪಿಗಳನ್ನು ಆತುರಕ್ಕೆ ಬಿದ್ದು ಬಂಧಿಸಲಿಲ್ಲ. ಉದ್ದೇಶಪೂರ್ವಕವಾಗಿ ಆರೋಪಿಗಳನ್ನು ನಿಧಾನವಾಗಿ ಗುರುತಿಸಿ, ತದನಂತರ ಅವರ ಬಂಧನವನ್ನು ವಿಳಂಬ ಮಾಡುತ್ತಾ ಹೋದರು.

ಅಂದರೆ ರೆಡ್ಡಿ ಸಲ್ಲಿಸಿರುವ ಜಾಮೀನು ಅರ್ಜಿಗಳ ವಿಚಾರಣೆ ಮುಗಿದು ಇನ್ನೇನು ನಾಂಪಲ್ಲಿ ಸಿಬಿಐ ಕೋರ್ಟಿನ ನ್ಯಾ. ನಾಗಶರ್ಮಾ ಅವರು ರೆಡ್ಡಿಗೆ ಜಾಮೀನು ನೀಡಬೇಕು ಎಂದು ತೀರ್ಮಾನಿಸುವ ಆಸುಪಾಸಿನಲ್ಲಿ ಹೊಸ ಆರೋಪಿಗಳ ಬಂಧನ, ಎಫ್ಐಆರ್ ರೆಡಿಯಾಗುತ್ತಿತ್ತು. 'ಹೊಸ ಕಾರ್ಯಾಚರಣೆ ಹಿನ್ನೆಲೆಯಲ್ಲಿ ರೆಡ್ಡಿಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಬೇಕಿದೆ. ಆದ್ದರಿಂದ ಅವರಿಗೆ ಜಾಮೀನು ನೀಡಬೇಡಿ' ಎನ್ನುತ್ತಿದ್ದರು. ಅಲ್ಲಿಗೆ ರೆಡ್ಡಿ ಜೈಲುವಾಸ ಮುಂದುವರಿಯುವಂತೆ ನೋಡಿಕೊಳ್ಳುತ್ತಿದ್ದರು.

ಲಕ್ಷ್ಮಿನಾರಾಯಣ ಇದನ್ನೇ ತಮ್ಮ ಅಧೀನ ಅಧಿಕಾರಿ ಜಿತೇಂದ್ರಗೂ ಧಾರೆಯೆರೆದಿದ್ದಾರೆ. ಅಲ್ಲಿಗೆ ರೆಡ್ಡಿಗೆ ಸದ್ಯಕ್ಕೆ ಮುಕ್ತಿಯಿಲ್ಲ. ಅಷ್ಟರ ಮಟ್ಟಿಗೆ ಇತರೆ ಆರೋಪಿಗಳಿಗೆ ಸಿಬಿಐ ಬಂಧನ ಕಾಡುತ್ತಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ರೆಡ್ಡಿ ಬಂಟ ಅಲಿಖಾನ್ ದೀರ್ಘಕಾಲದ ಕಳೆದ ಮೇಲೆ ಶರಣಾಗಿರುವುದು ಸಿಬಿಐಗೆ ವರವಾಗಿದೆ. ಇದೇ ಅಲಿಖಾನ್ ಅಲ್ಲಿನ ಸಿಬಿಐಗೂ ಬೇಕಾಗಿದ್ದಾನೆ. ಅಲ್ಲಿಗೆ ರೆಡ್ಡಿಗೆ ಜೈಲುವಾಸ ದೀರ್ಘಕಾಲ ಕಟ್ಟಿಟ್ಟಬುತ್ತಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+