ರೈಲ್ವೆ ಹಳಿ ಮೇಲೆ 3 ಪೈಪ್ ಬಾಂಬ್ ಪತ್ತೆ

pipe-bombs-found-cheruvathur-railway-kasargod
ಕಾಸರಗೋಡು, ಮಾ.3: ಚೆರುತ್ತೂರು ರೈಲ್ವೆ ಹಳಿಯ ಮೇಲೆ ಶನಿವಾರ ಬೆಳಗ್ಗೆ ಪೈಪ್ ಬಾಂಬ್ ಪತ್ತೆಯಾಗಿದೆ. ಚೆರುತ್ತೂರು- ಮಂಗಳೂರು ಪ್ಯಾಸೆಂಜರ್ ರೈಲು ಹಾದು ಹೋದ ಕೆಲ ಸಮಯದಲ್ಲೇ ಚೆರುತ್ತೂರು ರೈಲ್ವೆ ನಿಲ್ದಾಣದ ಸಮೀಪ 3 ಪೈಪ್ ಬಾಂಬ್‌ಗಳು ಪತ್ತೆಯಾಗಿವೆ.

ರೈಲ್ವೆ ಪೊಲೀಸರು ಕೂಡಲೇ ಸ್ಥಳಕ್ಕಾಗಮಿಸಿದ್ದು, ಚಂದೇರ ಠಾಣಾ ಪೊಲೀಸರು, ಬಾಂಬ್ ನಿಷ್ಕ್ರೀಯ ದಳ ಹಾಗೂ ಹಿರಿಯ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಬಾಂಬ್ ಸುತ್ತ ಮರಳು ಚೀಲಗಳನ್ನು ಇಟ್ಟು ಯಾವುದೇ ಅಪಾಯ ಸಂಭವಿಸದಂತೆ ಮುಂಜಾಗ್ರತೆ ವಹಿಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಸುರೇಂದ್ರನ್, ಕಾಂಞಿಂಗಾಡ್ ಎಎಸ್‌ಪಿ ಮಂಜುನಾಥ, ಸ್ಪೆಷಲ್ ಬ್ರಾಂಚ್ ಎಎಸ್ಪಿ ಎ. ಹರೀಶ್ಚಂದ್ರ ನಾಯಕ್ ಹಾಗೂ ರೈಲ್ವೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದು, ಶ್ವಾನದಳವೂ ಆಗಮಿಸಿ ತಪಾಸಣೆ ನಡೆಸಿದೆ.

ವಿಧ್ವಂಸಕ ಕೃತ್ಯ ನಡೆಸುವುದು ಬಾಂಬ್ ಇಟ್ಟವರ ಉದ್ದೇಶವಾಗಿರಬಹುದು ಎಂದು ಅಂದಾಜಿಸಲಾಗಿದೆ. ಆದರೆ, ದುಷ್ಕರ್ಮಿಗಳ ಪ್ರಯತ್ನ ಸಾರ್ವಜನಿಕರ ಸಮಯ ಪ್ರಜ್ಞೆಯಿಂದ ವಿಫಲವಾಗಿದೆ. ಬಾಂಬ್ ಪತ್ತೆಯಾಗಿರುವುದರಿಂದ ರೈಲು ನಿಲ್ದಾಣ, ಸೇತುವೆ ಮೊದಲಾದೆಡೆ ಮುನ್ನೆಚ್ಚರಿಕೆ ವಹಿಸುವಂತೆ ಹಿರಿಯ ಪೊಲೀಸ್ ಹಾಗೂ ರೈಲ್ವೆ ಅಧಿಕಾರಿಗಳು ಆದೇಶ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+