ವಕೀಲರ ಗೂಂಡಾಗಿರಿ:ಟಿವಿ ಮುಖ್ಯಸ್ಥರೊಂದಿಗೆ ಸಿಎಂ ಚರ್ಚೆ

'ಅಂಗೈ ಹುಣ್ಣಿಗೆ ಕನ್ನಡಿ ಬೇಕಾ ಮುಖ್ಯಮಂತ್ರಿಗಳೇ?' ಎಂದೇ ಸಭೆಯಲ್ಲಿ ಮಾತಿಗಾರಂಭಿಸಿದ ಸುವರ್ಣ ನ್ಯೂಸ್ ಚಾನೆಲ್ಲಿನ ಪ್ರಧಾನ ಸಂಪಾದಕ ವಿಶ್ವೇಶ್ವರ್ ಭಟ್ ಅವರು ಮುಖ್ಯಮಂತ್ರಿಗಳ ನಿಷ್ಕ್ರಿಯತೆ ಬಗ್ಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಸಿಎಂ ಸದಾನಂದರು ಟಿವಿ ಸಂಪಾದಕರುಗಳನ್ನು ಸಮಾಧಾನಪಡಿಸಲು ಯತ್ನಿಸಿದಾಗ ಇಡೀ ಸಂಪಾದಕ ವರ್ಗ ಗರಂ ಆಗಿದೆ. 'ಪುಂಡಾಟಿಕೆ ನಡೆಸಿದ ವಕೀಲರ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲೇಬೇಕು. ನೀವು ಈಗಾಗಲೇ ನ್ಯಾಯಾಂಗ ತನಿಖೆ ನಡೆಸುವುದಾಗಿ ಘೋಷಿಸಿದ್ದಾರೆ. ಆದರೆ ನಮಗೆ ಅದರಲ್ಲಿ ಎಳ್ಳಷ್ಟೂ ನಂಬಿಕೆಯಿಲ್ಲ. ನ್ಯಾಯಾಂಗ ತನಿಖೆ ಬೇಡ. ಪುಂಡಾಟಿಕೆ ನಡೆಸಿದವರ ವಿರುದ್ಧ ನಮ್ಮ ಚಾನೆಲ್ಲುಗಳಲ್ಲಿ ಎಲ್ಲ ಸಾಕ್ಷ್ಯಗಳೂ ಇವೆ. ಅವುಗಳ ಆಧಾರದ ಮೇಲೆ ನೇರವಾಗಿ ಕ್ರಮ ಕೈಗೊಳ್ಳಿ' ಎಂದು ವಿಶ್ವೇಶ್ವರ್ ಭಟ್ ಖಡಕ್ಕಾಗಿ ಸಿಎಂಗೆ ಹೇಳಿದರು.
ಸಭೆಯಲ್ಲಿ ಭಾಗವಹಿಸಿದ್ದ ಟಿವಿ9 ಮುಖ್ಯಸ್ಥ ಮಹೇಂದ್ರ ಮಿಶ್ರಾ ಅವರು 'ಒಕ್ಕೊರಲಿನಿಂದ ಸಿಬಿಐ ತನಿಖೆಗೆ ಒತ್ತಾಯಿಸಿದ್ದಾಗಿ' ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದ್ದಾರೆ. ಮುಖ್ಯಮಂತ್ರಿಗಳು ಕರೆದಿದ್ದ ಸಭೆಯಲ್ಲಿ ಪಬ್ಲಿಕ್ ಟಿವಿಯ ಅರುಣ್ ಕುಮಾರ್, ಜನಶ್ರೀ ಚಾನೆಲ್ಲಿನ ಅನಂತ್ ಚಿನಿವಾರ್, ಸಮಯ ಟಿವಿಯ ಶಿವಪ್ರಸಾದ್, ಕಸ್ತೂರಿ ಚಾನೆಲ್ ಮನೋಜ್ ಭಾಗವಹಿಸಿದ್ದರು.












Click it and Unblock the Notifications