ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೆಡ್ಡಿಯನ್ನು ಹಲಸೂರು ಠಾಣೆಗೇ ಕರೆತಂದಿದ್ದು ಏಕೆ?

By Srinath
|
Google Oneindia Kannada News

reddy-lodged-in-ulsoor-gate-station-but-why
ಬೆಂಗಳೂರು, ಮಾ.2: ರಾಜ್ಯ ರಾಜಧಾನಿಯ ಪೊಲೀಸರಿಗೆ ಭದ್ರತೆಯ ವಿಷಯದಲ್ಲಿ ತಮ್ಮ ಬಗ್ಗೆ ಅಪಾರ ನಂಬಿಕೆ, ವಿಶ್ವಾಸವಿರಬಹುದು. ಆದರೆ ನಗರದ ಟ್ರಾಫಿಕ್ ಬಗ್ಗೆ ಅವರಿಗೆ ಅಷ್ಟು ಭರವಸೆಯಿಲ್ಲ. ಬೆಂಗಳೂರಿನ ಟ್ರಾಫಿಕ್ ಜಾಮ್ ಅದರಲ್ಲೂ ಹೇಳಿಕೇಳಿ ಬೆಳಗಿನ 10 ಗಂಟೆಯಲ್ಲಿ, ಅದರಲ್ಲೂ ಬೆಂಗಳೂರಿನ ಹೃದಯ ಭಾಗಕ್ಕೆ ಜನಾರ್ದನ ರೆಡ್ಡಿಯಂತಹ ಆರ್ಥಿಕ ಭಯೋತ್ಪಾದಕನನ್ನು ಕರೆತರುವುದು ಕಷ್ಟ ಕಷ್ಟವೇ.

ಅದಕ್ಕಾಗಿ ಆ ಗೊಡವೆಯೇ ಬೇಡ. ಬೆಂಗಳೂರು ರಸ್ತೆಗಳು ಹೇಗೂ ಬೆಳ್ಳಂಬಳಗ್ಗೆ ದಣಿವಾರಿಸಿಕೊಳ್ಳುತ್ತಿರುತ್ತವೆ. ಕಣ್ಮುಚ್ಚಿಕೊಂಡು ಮೊದಲು ರೆಡ್ಡಿಯನ್ನು ಕೋರ್ಟಿಗೆ ಸಮೀಪವಿರುವ ಜೈಲಿನಲ್ಲಿ ತಂದು ಬಿಟ್ಟರೆ ಸಾಕು. ಮುಂದಿನದೆಲ್ಲ ಸಲೀಸು. ಅಲ್ಲಿಂದ ಕೂಗಳೆತೆಯಲ್ಲಿರುವ ಕೋರ್ಟಿನಲ್ಲಿ ಬಿಟ್ಟುಬರುವುದು ಏನೂ ಕಷ್ಟವಾಗಲಾರದು ಎಂದೆಣೆಸಿದ ಕೇಂದ್ರ ಡಿಸಿಪಿ ಜಿ. ರಮೇಶ್ ಸಾಹೇಬರು ರೆಡ್ಡಿಯನ್ನು ಅನಾಯಾಸವಾಗಿ ಅಲಸೂರು ಗೇಟ್ ಠಾಣೆಯಲ್ಲಿರುವ ಜೈಲಿಗೆ ಕರೆತಂದಿದ್ದಾರೆ. ಅಲ್ಲಿ ಮೊದಲ ಮಹಡಿಯಲ್ಲಿರುವ ಕೊಠಡಿಯೊಂದರಲ್ಲಿ ಇದೀಗ ಗಣಿಧಣಿ ದಣಿವಾರಿಸಿಕೊಳ್ಳುತ್ತಿದ್ದಾರೆ.

ಅಂದಹಾಗೆ ರೆಡ್ಡಿಗೆ ಅವರ ಸೋದರಿ, ಸಂಸದೆ ಜೆ. ಶಾಂತಾ, ಕಂಪ್ಲಿಯ ಸುರಸುಂದರಾಂಗ ಶಾಸಕ ಸುರೇಶ್ ಬಾಬು ಸ್ವಾಗತ ಕೋರಿದರು. ಇನ್ನು ದೇವನಹಳ್ಳಿಯಿಂದಲೇ ರೆಡ್ಡಿಯಿದ್ದ ಬಸ್ಸಿಗೆ ಸಮನಾಂತರವಾಗಿ ಶ್ರೀರಾಮುಲು ಸಹ ಬಸ್ಸಿನಲ್ಲಿ ಪ್ರಯಾಣಿಸಿದರು. ಜತೆಗೆ 50ಕ್ಕೂ ಹೆಚ್ಚು ವಾಹನಗಳು ರೆಡ್ಡಿಯನ್ನು ಹಿಂಬಾಲಿಸಿದವು.

English summary
The Associated Mining Company (AMC) scamster Janardhan Reddy arrives in Bangalore on Mar 3 at 4 am amid tight security. He is lodged in Ulsoor gate station but why?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X