ವಿದ್ಯಾರ್ಥಿಗಳು, ಪೊಲೀಸರ ಮೇಲೂ ವಕೀಲರ ಹಲ್ಲೆ

Media attack
ಬೆಂಗಳೂರು, ಮಾ.2: ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ಮಾಧ್ಯಮಗಳ ವಿರುದ್ಧ ರೊಚ್ಚಿಗೊದ್ದ ವಕೀಲರು ಇದೀಗ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳ ಮುಗಿ ಬಿದ್ದಿದ್ದಾರೆ. ಹುಚ್ಚರಂತೆ ವರ್ತಿಸುತ್ತಿರುವ ವಕೀಲರ ಗುಂಪೊಂದು ಪೊಲೀಸರ ಮೇಲೂ ಹಲ್ಲೆ ನಡೆಸಲು ಯತ್ನಿಸಿದೆ.

12.30: ಡಿಸಿಪಿ ರಮೇಶ್ ಮೇಲೆ ಹಲ್ಲೆ ನಡೆಸಿದ ವಕೀಲರು. ಪರಿಸ್ಥಿತಿ ಕೈ ಮೀರಿದ ಮೇಲೆ ಪೊಲೀಸರು ಎರಡು ಬಾರಿ ಅಶ್ರುವಾಯು ಪ್ರಯೋಗಿಸಿದ್ದಾರೆ. ವಕೀಲರ ಮೇಲೆ ಲಾಠಿ ಚಾರ್ಜ್ ಮಾಡಿ ಗುಂಪನ್ನು ಚದುರಿಸಲಾಗಿದೆ.

12.15: ಜನಶ್ರೀ, ಸುವರ್ಣವಾಹಿನಿ OB ವಾಹನ(ಸುಮಾರು 10 ಲಕ್ಷ ರು ಬೆಲೆ ಬಾಳುವ) ಗಳನ್ನು ವಕೀಲರು ಜಖಂಗೊಳಿಸಿದ್ದಾರೆ. ಸಿಟಿ ಸಿವಿಲ್ ಕೋರ್ಟ್ ಆವರಣಕ್ಕೆ ವಕೀಲರನ್ನು ಬಿಟ್ಟು ಬೇರೆ ಯಾರೂ ಪ್ರವೇಶಿಸದಂತೆ ತಡೆ ಹಿಡಿದಿರ ವಕೀಲರ ದುಂಡಾವರ್ತನೆ ಹತೋಟಿ ಮೀರುತ್ತಿದೆ.

12.10: ಸುಮಾರು 50 ಜನ ವಕೀಲರ ಗುಂಪು ಕೋರ್ಟ್ ಆವರಣವನ್ನು ತಮ್ಮ ವಶಕ್ಕೆ ತೆಗದುಕೊಂಡಿದೆ.

12.10: ಸುವರ್ಣ ವಾಹಿನಿ ವರದಿಗಾರನ ಮೇಲೆ ಹಲ್ಲೆ ಕ್ಯಾಮೆರಾ ಪುಡಿ ಮಾಡಿ, ನಿಂದಿಸಲಾಗಿದೆ. ಮಹಿಳೆ ವಕೀಲೆಯೊಬ್ಬರು ಎತ್ತರದ ದನಿಯಲ್ಲಿ ವರದಿಗಾರರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಬೆಳಗ್ಗೆ 10.40ರ ಸುಮಾರಿಗೆ ಕಲ್ಲು ತೂರಾಟ ನಡೆಸಿದ ಅಚ್ಚರಿಯ ಘಟನೆ ಶುಕ್ರವಾರ(ಮಾ.2) ನಡೆದಿದೆ.

ವಕೀಲರ ಪುಂಡಾಟಿಕೆಯಿಂದ ಪಬ್ಲಿಕ್ ಟಿವಿ ಕ್ಯಾಮೆರಮಾನ್ ನಾಗೇಶ್ ಅವರ ತಲೆಗೆ ತೀವ್ರವಾದ ಪೆಟ್ಟು ತಗುಲಿದೆ. ವಕೀಲರ ದಾದಾಗಿರಿಯನ್ನು ಖಂಡಿಸಿ ಎಲ್ಲಾ ಮಾಧ್ಯಮ ಪ್ರತಿನಿಧಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

ಅತ್ತ ಹಲಸೂರು ಗೇಟ್ ಪೊಲೀಸ್ ಠಾಣೆಯಿಂದ ಹೊರಬಿದ್ದ ಎಎಂಸಿ ಗಣಿಗಾರಿಕೆ ಪ್ರಕರಣದ ಆರೋಪಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರನ್ನು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಮತ್ತೆ ಟ್ರಾಫಿಕ್ ಜಾಮ್ : ಈ ಸಂದರ್ಭದಲ್ಲಿ ಚಿತ್ರೀಕರಣ ನಡೆಸಲು ಬಂದಿದ್ದ ಮಾಧ್ಯಮದವರ ಮೇಲೆ ವಕೀಲರು ಕಲ್ಲು ತೂರಾಟ ನಡೆಸಿ, ಮಾಧ್ಯಮಗಳಿಗೆ ಚಿತ್ರೀಕರಿಸಲು ನಿರ್ಬಂಧಿಸಿದರು. ವಕೀಲರ ಮಾತು ಕೇಳದೆ ಮಾಧ್ಯಮದವರು ಮುಂದೆ ನಡೆದಾಗ, ಸಿಟ್ಟಿಗೆದ್ದ ವಕೀಲರು ಕಲ್ಲು ಎಸೆದು, ಅವಾಚ್ಯ ಶಬ್ದಗಳಲ್ಲಿ ನಿಂದಿಸಿದ್ದಾರೆ. ಇದರಿಂದ ಕೋರ್ಟ್ ಆವರಣದಲ್ಲಿ ಗೊಂದಲಮಯ ವಾತಾವರಣ ಉಂಟಾಗಿದೆ.

ಸಾರ್ವಜನಿಕರಿಗೆ ಸೂಚನೆ...ವಕೀಲರ ಪುಂಡಾಟಿಕೆಯನ್ನು ಖಂಡಿಸಿ ಎಲ್ಲಾ ಮಾಧ್ಯಮ ಪ್ರತಿನಿಧಿಗಳು ಪ್ರತಿಭಟಿಸಿದ್ದಾರೆ. ಹೀಗಾಗಿ ಮೈಸೂರು ಬ್ಯಾಂಕ್ ವೃತ್ತ, ನೃಪತುಂಗ ರಸ್ತೆ, ಕೆಂಪೇಗೌಡ ರಸ್ತೆ ಕಡೆ ಚಲಿಸುವ ವಾಹನಗಳು ಬೇರೆ ಮಾರ್ಗ ಅನುಸರಿಸುವುದು ಉತ್ತಮ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+