ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನಾ ರೆಡ್ಡಿಯನ್ನು ಎದುರುಗೊಂಡಿದ್ದು ಯಾರು?

By Srinath
|
Google Oneindia Kannada News

ktk-illegal-mining-reddy-arrives-in-bng-mar2
ಬೆಂಗಳೂರು, ಮಾ.2: ಬಳ್ಳಾರಿ ಎಎಂಸಿ ಕಂಪನಿ ಅಕ್ರಮ ಗಣಿಗಾರಿಕೆ ಸಂಬಂಧ ಬೆಂಗಳೂರು ಸಿಬಿಐ ಹಿಡಿತಕ್ಕೆ ಸಿಕ್ಕಿರುವ ರಾಜ್ಯ ಮಾಜಿ ಸಚಿವ ಜನಾರ್ದನ ರೆಡ್ಡಿ ಚಂಚಲಗೂಡ ಜೈಲಿನಿಂದ ನೇರವಾಗಿ ಬೆಂಗಳೂರಿನ ಹೃದಯ ಭಾಗಕ್ಕೆ ಬಂದು ಸೇರಿಕೊಂಡಿದ್ದಾರೆ. ಶುಕ್ರವಾರ ಬೆಳಗಿನ ಜಾವ 4 ಗಂಟೆಗೆ ಹಡ್ಸನ್ ಸರ್ಕಲ್ ಬಳಿಯಿರುವ ಹಲಸೂರು ಗೇಟ್ ಪೊಲೀಸ್ ಠಾಣೆಗೆ ಅವರನ್ನು ಅತ್ಯಂತ ಬಿಗಿ ಭದ್ರತೆಯಿಂದ ಕರೆತರಲಾಯಿತು.

ಸುಮಾರು 30 ಮಂದಿ ಪ್ರಯಾಣಿಸಬಹುದಾದ ಹವಾನಿಯಂತ್ರಿತ ಮಿನಿ ಬಸ್ಸಿನಲ್ಲಿ ರೆಡ್ಡಿ ಸುಮಾರು 9 ಗಂಟೆ ಪ್ರಯಾಣ ಮಾಡಿ ಬಂದಿದ್ದಾರೆ. ಬಸ್ಸಿನಲ್ಲಿ ಒಬ್ಬ ರೆಡ್ಡಿಯನ್ನು ಬಿಟ್ಟರೆ ಬರೀ ಪೊಲೀಸ್ ಪೇದೆಗಳು ಒಂದಿಬ್ಬರು ಹಿರಿಯ ಅಧಿಕಾರಿಗಳು ಇದ್ದರು ಅಷ್ಟೆ. ಅಷ್ಟೂ ಪೊಲೀಸರು ಬಂದೂಕುಧಾರಿಗಳಾಗಿ ರೆಡ್ಡಿಯ ಕಾವಲು ಕಾಯುತ್ತಿದ್ದರು.

'ಜೈ ಜನಾರ್ದನ': ಇನ್ನು ಸರಿಯಾಗಿ 6 ತಿಂಗಳ ಹಿಂದೆ ಜೈಲುಪಾಲಾದ ಬಳಿಕ ರೆಡ್ಡಿ ಬೆಂಗಳೂರಿನಲ್ಲಿ ತಮ್ಮ ಮೊದಲ ಹೆಜ್ಜೆಯಿಟ್ಟರು. ಮಿನಿ ಬಸ್ಸಿನಿಂದ ಇಳಿಯುತ್ತಿದ್ದಂತೆ ರೆಡ್ಡಿಯನ್ನು ಎದುರುಗೊಂಡಿದ್ದು ಅವರ ಅತ್ಯಾಪ್ತ ಬಂಟ ಶ್ರೀರಾಮುಲು. ಕೇಂದ್ರ ಡಿಸಿಪಿ ರಮೇಶ್ ಇದಕ್ಕೆ ಸಾಕ್ಷಿಯಾದರು. ರೆಡ್ಡಿ ಕೆಳಗಿಳಿಯುವುದಕ್ಕೂ ಮುನ್ನ ಅವರನ್ನು ತಡೆದ ರಾಮುಲು, ಮೊದಲು ಅಲ್ಲಿ ನಿಮ್ಮ ಅಭಿಮಾನಿಗಳು ರಾತ್ರಿಯಿಂದ ಕಾದು ನಿಂತಿದ್ದಾರೆ. ಅವರತ್ತ ಕೈಬೀಸಿ, ಕೃತಜ್ಞತೆ ಸಲ್ಲಿಸಿ ಎಂದು ರೆಡ್ಡಿಗೆ ಸಂಜ್ಞೆ ಮಾಡಿ ತಿಳಿಸಿದರು.

ರಾಮುಲು ಆಜ್ಞಾನುವರ್ತಿಯಾಗಿ ರೆಡ್ಡಿ ಮುಗುಳ್ನಗುತ್ತಾ, ಕೈಯೆತ್ತಿದ್ದೇ ಬಂತು, ಬೆಂಗಳೂರಿನ ಮಾಧ್ಯಮಗಳಿಗೆ ಅನೇಕ ದಿನಗಳ ನಂತರ ರೆಡ್ಡಿಯ ಒಂದು ಒಳ್ಳೆ ಪೋಸ್ ಸಿಕ್ಕಿತು. ಅಭಿಮಾನಿಗಳು ಇದನ್ನು ಕಂಡು 'ಜೈ ಜನಾರ್ದನ ರೆಡ್ಡಿ' ಎಂದು ಕೂಗುತ್ತಾ, ಧನ್ಯೋಸ್ಮಿ ಎಂದರು.

ರೆಡ್ಡಿಯನ್ನು ಹಲಸೂರು ಗೇಟ್ ಪೊಲೀಸ್ ಠಾಣೆಗೇ ಕರೆತಂದಿದ್ದು ಏಕೆ? ಮುಂದೆ ಓದಿ...

English summary
The Associated Mining Company (AMC) scamster Janardhan Reddy arrives in Bangalore on Mar 3 at 4 am amid tight security
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X