• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಾಲಕನಿಗೆ ರಿವಾಲ್ವರ್ ತೋರಿಸಿ, ಥಳಿಸಿದ ಇನ್ಸ್‌ಪೆಕ್ಟರ್

By Srinath
|
ಕರೀಂನಗರ, ಮಾ.1: ಜಿಲ್ಲೆಯ ಜಗತಿಯಾಲ ಬಳಿ ಪೆಟ್ರೋಲ್ ಕದ್ದನೆಂದು ಹದಿನಾರರ ಬಾಲಕನನ್ನು ಸ್ಥಳೀಯ ಪೊಲೀಸ್ ಇನ್ಸ್‌ಪೆಕ್ಟರ್ ತಮ್ಮ ಪೇದೆಯ ಜತೆಗೂಡಿ ಮನಸೋ ಇಚ್ಛೆ ಥಳಿಸಿದ್ದಾರೆ. ಬುಧವಾರ ಟಿವಿ9 ಯಥಾವತ್ತಾಗಿ ದೃಶ್ಯಾವಳಿಗಳನ್ನು ಬಿತ್ತರಿಸಿದೆ. ಇದನ್ನು ನೋಡಿದ ರಾಜ್ಯ ಮಾನವ ಹಕ್ಕುಗಳ ಆಯೋಗವು ತಕ್ಷಣ ವರದಿ ಸಲ್ಲಿಸುವಂತೆ ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ಆದೇಶಿಸಿದೆ.

ಏನಾಯಿತೆಂದರೆ ದ್ವಿಚಕ್ರ ವಾಹನಗಳಿಂದ ಪೆಟ್ರೋಲ್ ಕದಿಯುತ್ತಿದ್ದಾನೆ ಎಂದು ಜಗತಿಯಾಲ ಠಾಣೆ ಇನ್ಸ್‌ಪೆಕ್ಟರ್ ದೇವಾ ರೆಡ್ಡಿ ಕಳೆದ ತಿಂಗಳು 27ರಂದು 16ರ ಬಾಲಕನನ್ನು ಕಸ್ಟಡಿಗೆ ತೆಗೆದುಕೊಂಡಿದ್ದರು. ಅದಕ್ಕೂ ಮುನ್ನ ಮಧ್ಯಾಹ್ನ ಪಟ್ಟಣದಲ್ಲಿ ಜನತೆಯ ಸಮ್ಮುಖದಲ್ಲಿ ಬಾಲಕನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ತನ್ನದೇನೂ ತಪ್ಪಿಲ್ಲವೆಂದು ಬಾಲಕ ಗೋಗರೆಯುತ್ತಿದ್ದರೂ ಇನ್ಸ್‌ಪೆಕ್ಟರ್ ದೇವಾ ಸಖತ್ ಗೂಸಾ ಕೊಡುತ್ತಾರೆ. ಇದರಿಂದ ಉತ್ತೇಜಿತನಾದ ಪೇದೆ ರಂಗಾರೆಡ್ಡಿಯೂ ಬಾಲಕನಿಗೆ ಸಿಕ್ಕಾಪಟ್ಟೆ ಹೊಡೆಯುತ್ತಾನೆ.

ರಾಕ್ಷಸರೂಪಿ ಇನ್ಸ್‌ಪೆಕ್ಟರ್ ದೇವಾ ತಾನು ಕೈಯಲ್ಲಿ ಹೊಡೆದಿದ್ದು ಸಾಲದು ಅಂತ ಉದ್ದನೆಯ ಬಾರುಕೋಲಿನಿಂದ ಬಾರಿಸುತ್ತಾನೆ. ನಂತರ ಒಂದು ಹಂತದಲ್ಲಿ ರಿವಾಲ್ವರ್ ತೋರಿಸಿ, ಬಾಲಕನನ್ನು ಬೆದರಿಸುತ್ತಾರೆ. ಅಪ್ರಾಪ್ತ ವಯಸ್ಸಿನ ಬಾಲಕನ ಮೇಲೆ ಹೀಗೆ ಅಮಾನವೀಯವಾಗಿ ನಡೆದುಕೊಂಡ ಪೊಲೀಸರ ವಿರುದ್ಧ ಗರಂ ಆಗಿರುವ ಅಪ್ರಾಪ್ತ ವಯಸ್ಸಿನ ಮಕ್ಕಳ ನ್ಯಾಯಮಂಡಳಿ ಇಂದು (ಮಾರ್ಚ್ 1) ವಿಚಾರಣೆಗಾಗಿ ಪೊಲೀಸರಿಬ್ಬರಿಗೂ ಬುಲಾವ್ ನೀಡಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಕಳ್ಳತನ ಸುದ್ದಿಗಳುView All

English summary
AP State Human Rights Commission on Wednesday (Feb 29) took serious note of a police inspector beating up a 15-year-old suspected thief in public at Jagitial area of Karimnagar district. Taking suo motu cognizance of the incident, the Commission directed the police chief to submit a report.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more