ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ಎಲ್ಲ ಸರ್ಕಾರಿ ಕಚೇರಿಗೆ ಇಂಟರ್ನೆಟ್

By Srinath
|
Google Oneindia Kannada News

ಬೆಂಗಳೂರು, ಫೆ.29, ಐಟಿ ಕಣಿವೆ ಎಂಬ ಹೆಗ್ಗೆಳಿಕೆ ಗಳಿಸಿದ ಒಂದು ದಶಕದ ತರುವಾಯ ರಾಜ್ಯ ಸರಕಾರ ಎಲ್ಲ ಸರ್ಕಾರಿ ಇಲಾಖೆಗಳಿಗೂ ಇಂಟರ್ನೆಟ್ ಕನೆಕ್ಷನ್ ಕೊಡಲು ಮುಂದಾಗಿದೆ. ಮುಖ್ಯಮಂತ್ರಿ ಗೃಹ ಕಚೇರಿಯಲ್ಲಿ ವಾರ್ತಾ ಇಲಾಖೆ ವೆಬ್‌ಸೈಟ್‌ (http://karnatakavarthe.org/) ಉದ್ಘಾಟಿಸಿದ ನಂತರ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರು ಸುದ್ದಿಗಾರರಿಗೆ ಮಂಗಳವಾರ ಈ ತಿಳಿಸಿದರು.

ಸರ್ಕಾರದ ಮಟ್ಟದಲ್ಲಿ ನಡೆಯುವ ಎಲ್ಲ ಮಾಹಿತಿಗಳು ಸಾರ್ವಜನಿಕರಿಗೆ ತಲುಪಬೇಕು. ಮುಖ್ಯಮಂತ್ರಿ ಕಚೇರಿಯಲ್ಲಿ ನಡೆಯುವ ಕಾರ್ಯಕ್ರಮಗಳ ಮಾಹಿತಿ ಕೂಡ ಜನರಿಗೆ ಲಭ್ಯವಾಗಬೇಕು. ಈ ಹಿನ್ನೆಲೆಯಲ್ಲಿ ಎಲ್ಲ ಇಲಾಖೆಗಳು ಅಂತರ್ಜಾಲ ತಾಣ ಹೊಂದಿರಬೇಕು ಎಂದು ಸೂಚಿಸಿದ್ದು, ಮಾರ್ಚ್‌ 15ರ ಒಳಗೆ ಈ ಸಂಬಂಧದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೂ ಆದೇಶಿಸಲಾಗಿದೆ ಎಂದು ಅವರು ಹೇಳಿದರು.

ವಾರ್ತಾ ಇಲಾಖೆ ಆರಂಭಿಸಿರುವ ನೂತನ ವೆಬ್‌ಸೈಟ್‌ನ್ನು ಜನಸ್ನೇಹಿಯಾಗಿ ರೂಪಿಸಲಾಗಿದ್ದು, ಅದರಲ್ಲಿ ಸರ್ಕಾರದ ಸಾಧನೆಗಳು, ಇಲಾಖೆ ಪ್ರಕಟಿಸುವ ಜನಪದ, ಸರ್ಕಾರಿ ಕಾರ್ಯಕ್ರಮಗಳ ವರದಿ, ಇಲಾಖೆಯಿಂದ ಕರೆಯಲಾಗುವ ಟೆಂಡರ್‌ಗಳ ಮಾಹಿತಿ ಪಡೆಯಬಹುದು ಎಂದರು.

ಈ ಹಿಂದೆ ರೂಪಿಸಲಾಗಿದ್ದ ವಾರ್ತಾ ಇಲಾಖೆಯ ಎರಡೂ ವೆಬ್‌ಸೈಟ್‌ಗಳು ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಂಡಿದ್ದವು. ಈಗ ಅವುಗಳ ಸುಧಾರಿತ ರೂಪದಲ್ಲಿ ಲೋಕಾರ್ಪಣೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

English summary
Karnataka CM Sadananda Gowda while inaugurating the website for Onformation dept, has said that all govt offices in Karnataka be given internet connection.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X