ಕೆಂಗೇರಿ ಇನ್ಸ್‌ಪೆಕ್ಟರ್ ನಾಯಕ್ ಶಿಷ್ಯ ಗಣಪತಿ ಜೈಲಿಗೆ

kengeri-inspector-vasudev-aide-ganapathi-jailed
ಬೆಂಗಳೂರು, ಫೆ. 27: ಕೆಂಗೇರಿಯ ಲಂಚಕೋರ ಪೊಲೀಸ್ ಇನ್‌ಸ್ಪೆಕ್ಟರ್ ವಾಸುದೇವ್ ನಾಯಕ್ ಅವರ ಭ್ರಷ್ಟಾಚಾರಗಳಲ್ಲಿ ಮಧ್ಯವರ್ತಿಯಾಗಿ ಮೆರೆಯುತ್ತಿದ್ದ ಅವರ ಖಾಸಾ ಶಿಷ್ಯ ಗಣಪತಿಯನ್ನು ಸುಮಾರು ಮೂರು ತಿಂಗಳ ಅಂತರದಲ್ಲಿ ಅಂಕೋಲಾದ ಪೊಲೀಸರು ಬಂಧಿಸಿದ್ದಾರೆ. ಗಣಪತಿಯನ್ನು ತಕ್ಷಣ ಬೆಂಗಳೂರು ಪೊಲೀಸರಿಗೆ ಒಪ್ಪಿಸಲಾಗಿ, ನ್ಯಾಯಾಧೀಶ ಎನ್.ಕೆ. ಸುಧೀಂದ್ರರಾವ್ ಅವರು ಆತನನ್ನು ಪರಪ್ಪನ ಅಗ್ರಹಾರ ಜೈಲಿಗಟ್ಟಿದ್ದಾರೆ.

ನವೆಂಬರ್ 26ರಂದು ಕೆಂಗೇರಿ ಪೊಲೀಸ್ ಇನ್‌ಸ್ಪೆಕ್ಟರ್ ವಾಸುದೇವ್ ನಾಯಕ್ ಲಾರಿ ಮಾಲೀಕರೊಬ್ಬರಿಂದ ಲಕ್ಷಾಂತರ ರೂಪಾಯಿ ಲಂಚ ಪಡೆದ ಪ್ರಕರಣದಲ್ಲಿ ಅಂಕೋಲಾದ ಗಣಪತಿ ನಾಯಕ್ ಮೂಲೆಮನೆ ತಲೆಮರೆಸಿಕೊಂಡಿದ್ದ.

ಈ ಹಿನ್ನೆಲೆಯಲ್ಲಿ ಘಟನೆ ನಡೆದ ತಕ್ಷಣ ಇಲಾಖಾ ತನಿಖೆ ನಡೆದಿತ್ತು. ಆಗ ಕೆಂಗೇರಿ ಠಾಣೆಯನ್ನು ತಪಾಸಣೆಗೊಳಪಡಿಸಲಾಗಿತ್ತು. ಆ ವೇಳೆ ಜಿಂಕೆ ಚರ್ಮ ಮತ್ತು ಆನೆ ದಂತದ ತುಂಡುಗಳು ಪತ್ತೆಯಾಗಿದ್ದವು. ಆ ಬಗ್ಗೆ ಇನ್‌ಸ್ಪೆಕ್ಟರ್ ವಾಸುದೇವರನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ, ಗಣಪತಿ ಕಾರವಾರ ಸುತ್ತಮುತ್ತಲಿನಲ್ಲಿ ಕಾಡುಗಳ್ಳತನದಲ್ಲಿ ಭಾಗಿಯಾಗಿರುವುದು ಗೋಚರವಾಯಿತು.

ಆರೋಪಿ ಗಣೇಶನ ಶೋಧಕ್ಕಾಗಿ ಕಾರವಾರ ಪೊಲೀಸರ ನೆರವನ್ನು ಪಡೆಯಲಾಯಿತು. ಖಚಿತ ಮಾಹಿತಿ ಮೇಲೆ ಅಂಕೋಲಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ವಿಚಾರಣೆ ಬಳಿಕ ಕಳೆದ ಬುಧವಾರವೇ ಆರೋಪಿಯನ್ನು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ (ಲೋಕಾಯುಕ್ತ) ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+