ಯಡ್ಡಿ ಮುಖಭಂಗ ಕೇಳಿ ತಿಳಿದುಕೊಂಡ ರೆಡ್ಡಿ
ಹೈದರಾಬಾದ್,
ಫೆ.26: ಅಕ್ರಮ ಗಣಿಗಾರಿಕೆ ಸಂಬಂಧ ಜೈಲುಪಾಲಾಗಿರುವ ಕರ್ನಾಟಕದ ಮಾಜಿ ಮಂತ್ರಿ ಜನಾರ್ದನ ರೆಡ್ಡಿ ಜೈಲಿನಲ್ಲಿದ್ದುಕೊಂಡು ಈಗ ಏನು ಮಾಡುತ್ತಿದ್ದಾರೆ? ಕರ್ನಾಟಕದಲ್ಲಿ ಯಜಮಾನ್ ಯಡಿಯೂರಪ್ಪನವರು (ಯಡಿಯೂರಪ್ಪನವರನ್ನು ರೆಡ್ಡಿ 'ಯಜಮಾನರು' ಅಂತಲೇ ಸಂಬೋಧಿಸುತ್ತಿದ್ದುದು) ಕಳೆದ ವಾರ ಎಬ್ಬಿಸಿದ್ದ ರಾಜಕೀಯ ಬಿರುಗಾಳಿ ಬಗ್ಗೆ ವಿಚಾರಿಸಿಕೊಳ್ಳುತ್ತಿದ್ದಾರಾ? ಎಂಬ ಕುತೂಹಲ ಮನೆ ಮಾಡಿದೆ. id="toptextpromo">ಜೈಲಿನಲ್ಲಿದ್ದುಕೊಂಡು
ಜನಾರ್ದನ ರೆಡ್ಡಿ ಕರ್ನಾಟಕ ರಾಜಕೀಯದಲ್ಲಿನ ಆಗುಹೋಗುಗಳ ಇಂಚಿಂಚೂ ಮಾಹಿತಿ ಪಡೆಯುತ್ತಿದ್ದಾರೆ. ಇಲ್ಲಿನ ರಾಜಕೀಯ ಬೆಳವಣಿಗೆಗಳಿಗೆ ಕಿವಿ ತೆರೆದಿಟ್ಟಿದ್ದಾರೆ. ಇದಕ್ಕೆ ನಾರವಾಗುತ್ತಿರುವುದು ಅವರ ಖಾಸಾ ದೋಸ್ತ್ ಶ್ರೀರಾಮುಲು ಎಂಬುದನ್ನು ಇಲ್ಲಿ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. id='are-slot-1' class='oiad oi-axt oiadv'> id='top-searched-articles'>ಶುಕ್ರವಾರ
ಜನಾರ್ದನ ರೆಡ್ಡಿಯನ್ನು ಚಂಚಲಗೂಡ ಜೈಲಿನಲ್ಲಿ ಭೇಟಿಯಾಗಿದ್ದ ಬಳ್ಳಾರಿಯ 'ಸರ್ವ ಸ್ವತಂತ್ರ ಹಕ್ಕಿ' ರಾಮುಲು, ಅಣ್ಣ ಜನಾ ರೆಡ್ಡಿಗೆ ಅಷ್ಟೂ ಮಾಹಿತಿಯನ್ನು ಸಮಗ್ರವಾಗಿ ಒದಗಿಸಿದ್ದಾರೆ. ಯಡಿಯೂರಪ್ಪ ಮುಖಭಂಗ ಅನುಭವಿಸಿದ್ದನ್ನು ರೆಡ್ಡಿಗೆ ರಾಮುಲು ಎಳೆ ಎಳೆಯಾಗಿ ಬಿಡಿಸಿ ಹೇಳಿದ್ದಾರೆ ಎಂದು ರಾಮುಲು ಆಪ್ತ ಮೂಲಗಳು ತಿಳಿಸಿವೆ. ಆದರೆ ಇದಕ್ಕೆ ರೆಡ್ಡಿ ಪ್ರತಿಕ್ರಿಯೆ ಏನಾಗಿತ್ತು. ರೆಡ್ಡಿ ಆಜ್ಞಾನುವರ್ತಿ ರಾಮುಲು ಅವರ ಮುಂದಿನ ರಾಜಕೀಯ ನಡೆಯೇನು ಎಂಬುದು ಬಹಿರಂಗವಾಗಿಲ್ಲ.











Click it and Unblock the Notifications