ನಳಿನಾ 'ಅಣಕು' ಸಾವು: 4 ಅಧಿಕಾರಿಗಳ ಅಮಾನತು

fire-dept-mock-drill-girl-nalina-death-4-suspended
ಬೆಂಗಳೂರು,ಫೆ.26: ಅಮಾಯಕ ಯುವತಿಯ ಅಮಾನವೀಯ ಸಾವಿಗೆ ಕಾರಣವಾದ ಅಗ್ನಿಶಾಮಕ ದಳದ 4 ಅಧಿಕಾರಿಗಳನ್ನು ಇಲಾಖೆಯ ಸೇವೆಯಿಂದ ಅಮಾನತು ಮಾಡಲಾಗಿದೆ. ಸೂಕ್ತ ಮುನ್ನೆಚ್ಚರಿಕೆ ಕೈಗೊಳ್ಳದ ಮತ್ತು ಕರ್ತವ್ಯ ನಿರ್ಲಕ್ಷ್ಯಕ್ಕಾಗಿ ಈ ನಾಲ್ಕೂ ಅಧಿಕಾರಿಗಳನ್ನು ರಾಜ್ಯ ಅಗ್ನಿಶಾಮಕ ದಳ ಮತ್ತು ತುರ್ತು ಸೇವೆಗಳ ಇಲಾಖೆ ಮಹಾನಿರ್ದೇಶಕ ಎ.ಆರ್‌.ಇನ್‌ಫೆಂಟ್‌ ಮನೆಗೆ ಕಳಿಸಿದ್ದಾರೆ.

ಸಸ್ಪೆಂಡ್ ಆದ ಅಧಿಕಾರಿಗಳ ವಿವರ:
1. ದೇವರಾಜು- ಜಿಲ್ಲಾ ಅಗ್ನಿಶಾಮಕ ಅಧಿಕಾರಿ, ಪೀಣ್ಯ ವಿಭಾಗ, 2. ಕೆ ನಾರಾಯಣ ಸ್ವಾಮಿ- ಜಿಲ್ಲಾ ಅಗ್ನಿಶಾಮಕ ಅಧಿಕಾರಿ, ಹೆಬ್ಬಾಳ ವಿಭಾಗ, 3. ನಿಸ್ಸಾರ್ ಅಹಮದ್- ಠಾಣಾಧಿಕಾರಿ, ಹೈಗ್ರೌಂಡ್ಸ್ ಅಗ್ನಿಶಾಮಕ ಠಾಣೆ ಮತ್ತು 4. ಮರಿಯಣ್ಣ- ಠಾಣಾಧಿಕಾರಿ, ಯಶವಂತಪುರ ಹೈಗ್ರೌಂಡ್ಸ್ ಅಗ್ನಿಶಾಮಕ ಠಾಣೆ.

ಪೀಣ್ಯ ವಿಭಾಗದ ಅಗ್ನಿಶಾಮಕ ದಳದ ಅಣಕು ಪ್ರದರ್ಶನದ ವೇಳೆ ಶುಕ್ರವಾರ ಮಧ್ಯಾಹ್ನ ಈ ಅನಾಹುತ ಸಂಭವಿಸಿತ್ತು. ಅಣಕು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದ ಸ್ಥಳೀಯ ಗಾರ್ಮೆಂಟ್ಸ್ ಉದ್ಯೋಗಿ ಸಿ ಆರ್ ನಳಿನಾ (25) ದುರಂತ ಸಾವನ್ನಪ್ಪಿದ್ದರು.

ಹುಟ್ಟೂರಿನಲ್ಲಿ ಶನಿವಾರ ಅಂತ್ಯಕ್ರಿಯೆ: ನಳಿನಾ ಗೌರಿಬಿದನೂರು ನಗರಗೆರೆ ಹೋಬಳಿಯ ಚಿತ್ತಾವಲಹಳ್ಳಿಯ ರಾಮಕೃಷ್ಣ ರೆಡ್ಡಿ ಎಂಬವರ ಮಗಳು. ನಳಿನಾ ಗೌರಿಬಿದನೂರಿನ ಆಚಾರ್ಯ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಪದವಿ ಮುಗಿಸಿ, ಎಂಎಸ್ ಡಬ್ಲ್ಯು ವ್ಯಾಸಂಗ ಮಾಡಿದ್ದರು. ಮುಂದೆ ಪಿಎಚ್. ಡಿ ಮಾಡುವ ಇರಾದೆಯನ್ನೂ ಹೊಂದಿದ್ದರು.

ನಳಿನಾ ಅವರ ಅಂತ್ಯಕ್ರಿಯೆಯು ಹುಟ್ಟೂರಿನಲ್ಲಿ ಶನಿವಾರ ನಡೆಯಿತು. ನಳಿನಾ ಮೃತದೇಹ ಗ್ರಾಮಕ್ಕೆ ಬರುತ್ತಿದ್ದಂತೆ ಇಡೀ ಊರಿನ ಜನ ದುಖತಪ್ತರಾದರು. ನಳಿನಾ ಕೆಲಸ ಮಾಡುತ್ತಿದ್ದ ಬಾಂಬೆ ರೇಯಾನ್ ಫ್ಯಾಷನ್ಸ್ ಗಾರ್ಮೆಂಟ್ ಕಾರ್ಖಾನೆಯಿಂದ 500 ಕ್ಕೂ ಹೆಚ್ಚು ನೌಕರರು ಬಸ್ ಗಳಲ್ಲಿ ಗ್ರಾಮಕ್ಕೆ ಆಗಮಿಸಿ, ಅಗಲಿದ ತಮ್ಮ ಸಹೋದ್ಯೋಗಿಗೆ ಅಂತಿಮ ನಮನ ಸಲ್ಲಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+