ಹಿಂದೂ ಯುವ ನೇತಾರ ಸುನಿಲ್ ಕುಮಾರ್ ವ್ಯಕ್ತಿ ಚಿತ್ರ

ಬಿಜೆಪಿಯ ಭದ್ರಕೋಟೆ ಎನಿಸಿರುವ ಎರಡೂ ಜಿಲ್ಲೆಗಳನ್ನು ಒಳಗಂಡ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ಗೆಲುವಿನ ನಗೆ ಬೀರಲು ಸಿದ್ಧತೆ ನಡೆಸಿದ್ದಾರೆ. ಯುವಮೋರ್ಚಾದ ಅಧ್ಯಕ್ಷ ಸುನಿಲ್ ಅವರ ಸಂಕ್ಷಿಪ್ತ ಪರಿಚಯ ಇಲ್ಲಿದೆ...
ಶಾಲಾ ದಿನಗಳಿಂದಲೇ ಆರೆಸ್ಸೆಸ್ ಹಾಗೂ ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತರಾಗಿ ವಿ. ಸುನೀಲ್ ಕುಮಾರ್ ಗುರುತಿಸಿಕೊಂಡಿದ್ದಾರೆ. ಕಾರ್ಕಳದ ವಾಸುದೇವ- ಪ್ರಮೋದ ದಂಪತಿಯ ಪುತ್ರ ಸುನಿಲ್ ಅವರು ಇವರು ಬಿಲ್ಲವ ಸಮುದಾಯಕ್ಕೆ ಸೇರಿದ್ದಾರೆ.
* ಚಿಕ್ಕಮಗಳೂರಿನ ಐಡಿಎಸ್ಜಿ ಹಾಗೂ ಸಾಗರದ ಲಾಲ್ ಬಹಾದ್ದೂರ್ ಶಾಸ್ತ್ರಿ ಕಾಲೇಜಿನಲ್ಲಿ ಬಿ.ಎ. ಪದವಿ.
* ಪದವಿ ಪೂರ್ವ ಕಾಲೇಜಿನಲ್ಲಿ ಕಾಲೇಜು ಯೂನಿಯನ್ ಮುಖ್ಯಸ್ಥರಾಗಿದ್ದರು. ಎಬಿವಿಪಿಯ ಮುಂದಾಳತ್ವ ವಹಿಸಿ ಜೈಲು ವಾಸವನ್ನೂ ಅನುಭವಿಸಿದ್ದಾರೆ.
* 1997ರಲ್ಲಿ ಬಜರಂಗ ದಳದ ಜಿಲ್ಲಾ ಸಂಚಾಲಕ, ವಿಭಾಗ ಸಂಚಾಲಕ ಹಾಗೂ ರಾಜ್ಯ ಸಂಚಾಲಕನಾಗಿ ದತ್ತಪೀಠ ಹೋರಾಟದ ಮುಂಚೂಣಿಯಲ್ಲಿದ್ದರು.
* 2004ರ ವಿಧಾನಸಭಾ ಚುನಾವಣೆಯಲ್ಲಿ ಕಾರ್ಕಳ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು.
* 2008ರ ಚುನಾವಣೆಯಲ್ಲಿ ಎಚ್. ಗೋಪಾಲ ಭಂಡಾರಿ ವಿರುದ್ಧ ಸೋಲನುಭವಿಸಿದರು.
* ಶಾಸಕರಾಗಿದ್ದ ಸಂದರ್ಭದಲ್ಲೇ ರಾಜ್ಯ ಬಿಜೆಪಿ ಕಾರ್ಯದರ್ಶಿಯಾಗಿ ಆಯ್ಕೆಗೊಂಡಿದ್ದರು. ನಂತರ ಬಿಜೆಪಿ ರಾಷ್ಟ್ರೀಯ ಯುವಮೋರ್ಚಾದ ಕಾರ್ಯದರ್ಶಿದರು.
* ಪ್ರಸ್ತುತ ರಾಜ್ಯ ಬಿಜೆಪಿ ಯುವಮೋರ್ಚಾದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
* ಎಬಿವಿಪಿ, ದತ್ತಮಾಲೆ ಅಭಿಯಾನ, ಭಜರಂಗದಳ ಸಂಚಾಲಕ, ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷ. ವಿಶೇಷ ಎಂದರೆ ಸುನಿಲ್ ಅವರು ಪ್ರಗತಿಪರ ಕೃಷಿಕರೂ ಹೌದು. ಜಯಪ್ರಕಾಶ್ ಹೆಗ್ಡೆ ಅವರಿಗಿಂತ ಸುನಿಲ್ ಅವರಿಗೆ ರಾಜಕೀಯ ಕಡಿಮೆ ಅನುಭವವಿದ್ದರೂ, ಜನಪ್ರಿಯತೆಗೇನೂ ಕಮ್ಮಿಯಿಲ್ಲ.












Click it and Unblock the Notifications