ಕಿಂಗ್ ಮೇಲೆತ್ತಲು 1650 ಕೋಟಿ ಪ್ಯಾಕೇಜ್: ಎಸ್ ಬಿಐ

ಸರ್ಕಾರಿ ಸ್ವಾಮ್ಯದ ದೇಶದ ಅತಿ ದೊಡ್ಡ ಬ್ಯಾಂಕ್ ಜಾಲ ಹೊಂದಿರುವ ಎಸ್ ಬಿಐ, ಸರ್ಕಾರದ ಗಮನಕ್ಕೆ ಬಾರದೆ ಈ ರೀತಿ ವಿಜಯ್ ಮಲ್ಯ ಅವರೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದೆ ಎನ್ನಲಾಗಿದೆ.
ಬೇಲ್ ಔಟ್ ಸುದ್ದಿ ಹಬ್ಬುತ್ತಿದ್ದಂತೆ ಷೇರುಪೇಟೆಯ ದಿನದ ಮೊದಲಾರ್ಧದಲ್ಲಿ ಕಿಂಗ್ ಫಿಷರ್ ಷೇರುಗಳು ಶೇ.8ರಷ್ಟು ಏರಿಕೆ ಕಂಡಿತ್ತು. ಆದರೆ, ಎಸ್ ಬಿಐ ಷೇರುಗಳು ಇಳಿಮುಖವಾಗಿತ್ತು.
ಸುಮಾರು 7,057 ಕೋಟಿ ರು ಸಾಲದ ಹೊರೆ ಹೊಂದಿರುವ ಕಿಂಗ್ ಫಿಷರ್ ಸಂಸ್ಥೆ ಬ್ಯಾಂಕ್ ವಹಿವಾಟುಗಳನ್ನು ಸ್ಥಗಿತಗೊಳಿಸಿರುವುದನ್ನು ಹಂತ ಹಂತವಾಗಿ ಸಡಿಲಗೊಳಿಸಲು ಆದಾಯ ತೆರಿಗೆ ಇಲಾಖೆ ಒಪ್ಪಿಗೆ ಸೂಚಿಸಿದೆ ಎನ್ನಲಾಗಿದೆ.
ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆಗೆ ಪರಿಹಾರ ಪ್ಯಾಕೇಜ್ ಘೋಷಿಸಿದಂತೆ ಖಾಸಗಿ ಸಂಸ್ಥೆಗಳಿಗೆ ನೀಡಲು ಸಾಧ್ಯವಿಲ್ಲ ಎಂದು ಸಚಿವ ಅಜಿತ್ ಸಿಂಗ್ ಹೇಳಿದ್ದಾರೆ. ಆದರೆ, ಕಿಂಗ್ ಫಿಷರ್ ಸಂಸ್ಥೆ ಉಳಿಯಬೇಕು ಎಂದು ಸಚಿವ ಎಂ ವೀರಪ್ಪ ಮೊಯ್ಲಿ ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications