ಬಿಜೆಪಿ ಬಿಕ್ಕಟ್ಟಿನ ರಹಸ್ಯ ಬಿಚ್ಚಿಟ್ಟ ಕೃಷ್ಣಯ್ಯ ಶೆಟ್ಟಿ

Reason Behind BJP Crisis
ಬೆಂಗಳೂರು, ಫೆ.21 : ರಾಜ್ಯದಲ್ಲಿನ ರಾಜಕೀಯ ಅಸ್ಥಿರತೆ, ಯಡಿಯೂರಪ್ಪ ಅವರ ಸರ್ಕಾರ ಪತನ ಹಾಗೂ ಬಿಜೆಪಿ ಬಿಕ್ಕಟ್ಟಿನ ಹಿಂದಿನ ರಹಸ್ಯವನ್ನು ಮಾಜಿ ಮುಜರಾಯಿ ಸಚಿವ ಕೃಷ್ಣಯ್ಯ ಶೆಟ್ಟಿ ಹೊರಗೆಡವಿದ್ದಾರೆ.

ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ಅವರ ಹೆಸರಿನಲ್ಲಿ ಎಲ್ಲಾ ಮುಜರಾಯಿ ದೇವಾಲಯಗಳಲ್ಲಿ ನಿತ್ಯ ಪೂಜೆ ಕಡ್ಡಾಯಗೊಳಿಸಲಾಗಿತ್ತು. ಆದರೆ, ಅಂದಿನ ಮುಜರಾಯಿ ಸಚಿವ ಕೃಷ್ಣಯ್ಯ ಶೆಟ್ಟಿ ಅವರು ನೀಡಿದ್ದ ಆದೇಶಕ್ಕೆ ಭಾರಿ ಪ್ರತಿರೋಧ ಕಂಡು ಬಂದಿತ್ತು. ಸ್ವತಃ ಯಡಿಯೂರಪ್ಪ ಅವರು ಮುಜುಗರ ಅನುಭವಿಸಿದ್ದರು.

ನಂತರ ಯಡಿಯೂರಪ್ಪ ಹೆಸರಿನಲ್ಲಿ ದೇವರಿಗೆ ಪೂಜೆ ಮಾಡುವುದನ್ನು ನಿಲ್ಲಿಸಲಾಗಿತ್ತು. ಇದರ ಪರಿಣಾಮ ಈಗ ಬಿಜೆಪಿಯಲ್ಲಿ ಒಡಕು ಮೂಡಿದೆ. ರಾಜಕೀಯ ಸಮಸ್ಯೆಗಳು ತಲೆದೋರಿವೆ ಎಂದು ಮಾಜಿ ಮಂತ್ರಿ ಕೃಷ್ಣಯ್ಯ ಸೆಟ್ಟಿ ಹೇಳಿದ್ದಾರೆ.

ದಿನಂಪ್ರತಿ ಎಲ್ಲಾ ದೇವಾಲಯಗಳಲ್ಲೂ ಪೂಜೆ ಮಾಡಬೇಕೆಂದು ಆದೇಶ ಹೊರಡಿಸಿದ್ದೆ. ಆದರೆ ಅದನ್ನು ಒಂದೇ ತಿಂಗಳು ಮಾಡಲಾಗಿತ್ತು. ನಂತರ ನಿಲ್ಲಿಸಲಾಗಿತ್ತು. ಪೂಜೆಯನ್ನ ಅರ್ಧಕ್ಕೆ ನಿಲ್ಲಿಸಿದ್ದರಿಂದಲೇ ರಾಜ್ಯದ ಈ ದುಸ್ಥಿತಿಗೆ ಕಾರಣವಾಗಿದೆ. ಯಡಿಯೂರಪ್ಪ ಅವರ ಸರ್ಕಾರ ಪತನ, ವೃಥಾ ಆರೋಪಗಳು, ಸ್ವಜನರಿಂದಲೇ ಹಾನಿ ಎಲ್ಲವೂ ಇದರ ಫಲ ಎಂದು ಶೆಟ್ಟರು ಹೇಳಿದ್ದಾರೆ.

ನನಗ ಮತ್ತೆ ಮುಜರಾಯಿ ಖಾತೆ ಸಚಿವನಾಗುವ ಆಸೆಯಂತೂ ಇದೆ ಆದರೆ, ನನಗೆ ಮತ್ತೆ ಸದಾನಂದ ಗೌಡರ ಸಂಪುಟದಲ್ಲಿ ಸ್ಥಾನ ಸಿಗುತ್ತದೆ ಎಂಬ ನಂಬಿಕೆಯಿಲ್ಲ. ದೇವರು ಬಯಸಿದರೆ ಬಿಜೆಪಿ ಬಿಕ್ಕಟ್ಟು ಪರಿಹಾರವಾಗುತ್ತೆ ಇಲ್ಲದಿದ್ದರೆ ಇಲ್ಲ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+