ತಿರಪ್ಪೂರು ಆಭರಣ ಮಳಿಗೆಯಲ್ಲಿ ಗ್ರೇಟ್ ರಾಬರಿ

ಮಂಗಳವಾರ(ಫೆ.21) ಮುಂಜಾನೆ ಅಂಗಡಿಯ ಹಿಂದಿನ ಗೋಡೆಯ ವೆಂಟಿಲೇಟರ್ ನ ಸರಳುಗಳನ್ನು ಮುರಿದು ಒಳನುಗ್ಗಿದ ದರೋಡೆಕೋರರು ಸುಲಭವಾಗಿ ಮಳಿಗೆಯಲ್ಲಿದ್ದ ಆಭರಣಗಳನ್ನು ದೋಚಿದ್ದಾರೆ. ಕೆಲಸ ಮುಗಿದ ಮೇಲೆ ಬಂದ ದಾರಿಯಲ್ಲೇ ಪರಾರಿಯಾಗಿದ್ದಾರೆ. ಸ್ಥಳದಲ್ಲಿ ನಾಲ್ಕು ಗ್ಯಾಸ್ ಕಟ್ಟರ್ ಗಳು ಹಾಗೂ ಒಂದು ಬ್ಯಾಗ್ ಪತ್ತೆಯಾಗಿದೆ.
ಕಳೆದ ನಾಲ್ಕು ತಿಂಗಳ ಹಿಂದೆ ಇಲ್ಲಿಗೆ ಸಮೀಪದ ಮುತ್ತೂಟ್ ಫೈನಾನ್ಸ್ ಕಂಪನಿಯಿಂದ 4 ಕೆಜಿ ಚಿನ್ನದ ಆಭರಣಗಳನ್ನು ಖದೀಮರು ದೋಚಿದ್ದರು. ಈಗ ಅಲುಕ್ಕಾಸ್ ಸಮೂಹಕ್ಕೆ ಸೇರಿದ ಮಳಿಗೆಯಲ್ಲಿ ಸುಮಾರು 14 ಕೋಟಿ ರು.ಗೂ ಅಧಿಕ ಮೌಲ್ಯದ ಚಿನ್ನ ಮತ್ತು ವಜ್ರದ ಆಭರಣಗಳು ಕಳುವಾಗಿದೆ.
36 ಕೆಜಿ ಅಪ್ಪಟ ಚಿನ್ನದ ಆಭರಣ ಹಾಗೂ 2 ಕೆಜಿ ವಜ್ರದ ಹರಳುಗಳು ಕಾಣೆಯಾಗಿದೆ ಕಳುವಾದ ವಸ್ತುಗಳ ಮೌಲ್ಯ 14 ಕೋಟಿ ರು ಇರಬಹುದು ಎಂದು ಅಂದಾಜಿಸಲಾಗಿದೆ. ಪ್ರಕರಣದ ತನಿಖೆಗೆ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಡಿಐಜಿ ಸಂಜಯ್ ಕುಮಾರ್ ಅವರು ಹೇಳಿದ್ದಾರೆ.












Click it and Unblock the Notifications