ದೇವದುರ್ಗ ಸ್ಮಶಾನದಿಂದ ಮೂರು ಶವ ನಾಪತ್ತೆ!
ರಾಯಚೂರು,
ಫೆ. 20 : ಅಮವಾಸ್ಯೆಯ ಹಿಂದಿನ ದಿನ, ಮಹಾಶಿವರಾತ್ರಿ ಹಬ್ಬದಂದು ಭಕ್ತರೆಲ್ಲರೂ, ಶಿವನ ಧ್ಯಾನ ಮತ್ತು ಜಾಗರಣೆಯಲ್ಲಿ ನಿರತರಾಗಿರುವ ಹೊತ್ತಿನಲ್ಲಿ ದುರುಳರು ಸ್ಮಶಾನದಲ್ಲಿ ಹೂಳಿದ್ದ ಮೂರು ಹೆಣಗಳನ್ನು ಕದ್ದು ಹೋಗಿರುವ ವಿಚಿತ್ರ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿ ನಡೆದಿದೆ. id="toptextpromo">ಫೆ.20ರ
ಮಧ್ಯರಾತ್ರಿ ದೇವದುರ್ಗ ಪೊಲೀಸ್ ಠಾಣೆಯ ಪಕ್ಕದಲ್ಲೇ ಇದ್ದ ಸ್ಮಶಾನದಿಂದ ಒಂದು ಮಗುವಿನ ಶವ ಸೇರಿದಂತೆ ಮೂವರ ದೇಹಗಳನ್ನು ತೆಗೆದುಕೊಂಡು ಹೋಗಲಾಗಿದೆ. ಅಸ್ತಿಪಂಜರದ ಕೆಲ ಭಾಗಗಳು ಆ ಸ್ಥಳದಲ್ಲಿಯೇ ದೊರೆತಿದ್ದು, ಕೆಲ ಭಾಗಗಳು ಕಾಣೆಯಾಗಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ. id='are-slot-1' class='oiad oi-axt oiadv'> id='top-searched-articles'>ಸ್ಥಳೀಯರ
ಪ್ರಕಾರ, ದೇಹಗಳನ್ನು ವಾಮಾಚಾರಕ್ಕೆ ಬಳಸಿಕೊಳ್ಳಲೆಂದು ಕದ್ದುಕೊಂಡು ಹೋಗಲಾಗಿದೆ. ಇತ್ತೀಚಿನ ದಿನಗಳಲ್ಲಿ ವಾಮಾಚಾರದ ಪ್ರಕರಣಗಳೂ ಜಾಸ್ತಿಯಾಗುತ್ತಿವೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಹಲವಾರು ಜನರ ವಿಚಾರಣೆ ನಡೆಸುತ್ತಿದ್ದಾರೆ. ಶೀಘ್ರದಲ್ಲಿ ಕಳ್ಳರ ಜಾಡು ಹಿಡಿದು ಬಂಧಿಸುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.











Click it and Unblock the Notifications