ಗುಜರಾತ್: ಶಿವರಾತ್ರಿ ಆಚರಣೆ ಕಾಲ್ತುಳಿತಕ್ಕೆ 6 ಬಲಿ
ಜುನಾಗಢ
(ಗುಜರಾತ್), ಫೆ.20: ಜುನಾಗಢ ಜಿಲ್ಲೆಯ ಮೌಂಟ್ ಗಿರಿನಾರ್ ಬೆಟ್ಟ ಶ್ರೇಣಿಯಲ್ಲಿರುವ ಭವನಾಥ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ನಿಮಿತ್ತ ನಡೆದ ವಾರ್ಷಿಕ ಪೂಜೆ ವೇಳೆ ಕಾಲ್ತುಳಿತ ಸಂಭವಿಸಿದ್ದು, ಒಂದು ಹಸುಳೆ ಸೇರಿದಂತೆ (ಪಕ್ಕದ ಚಿತ್ರ ನೋಡಿ) ಆರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 12 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಭಾನುವಾರ ನಡುರಾತ್ರಿ ಈ ದುರ್ಘಟನೆ ಸಂಭವಿಸಿದೆ. id="toptextpromo">ಮಹಾ
ಶಿವರಾತ್ರಿ ಪೂಜೆಗಾಗಿ ಭಾನುವಾರ ಬೆಳಗ್ಗೆಯಿಂದಲೇ ಸಾವಿರಾರು ಭಕ್ತರ ಮಹಾಪೂರ ಹರಿದುಬಂದಿತ್ತು. ಜೀಪೊಂದು ಬ್ರೇಕ್ ಫೈಲ್ ಆಗಿ ನಿಯಂತ್ರಣ ತಪ್ಪಿ ಜನಜಂಗುಳಿಯತ್ತ ನುಗ್ಗಿದಾಗ ಭಕ್ತರು ಆತಂಕದಿಂದ ದಿಕ್ಕಾಪಾಲಾಗಿ ಓಡತೊಡಗಿದರು. ಆ ವೇಳೆ ಕಾಲ್ತುಳಿತವುಂಟಾಗಿ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಟ್ರಾಫಿಕ್ ಜಾಮ್ ನಿಂದಾಗಿ ಸ್ಥಳಕ್ಕೆ ಆಂಬುಲೆನ್ಸ್ ವಾಹನಗಳು ಬರುವುದಕ್ಕೆ ತೊಡಕಾಗಿತ್ತು. id='are-slot-1' class='oiad oi-axt oiadv'> id='top-searched-articles'>ಈ
ಮಧ್ಯೆ, ರಾಜ್ಯದ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ದುರ್ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ಘಟನೆಯಲ್ಲಿ ಸಾವಿಗೀಡಾದವರ ಕುಟುಂಬಗಳಿಗೆ ಒಂದು ಲಕ್ಷ ರುಪಾಯಿ ತುರ್ತು ಪರಿಹಾರ ಘೋಷಿಸಿದ್ದಾರೆ.











Click it and Unblock the Notifications