ಹೈದರಾಬಾದ್ ವಿದ್ಯಾರಣ್ಯ ಸ್ಕೂಲ್ ನಿಧಿ ಇನ್ನೂ ನಿಗೂಢ
ಹೈದರಾಬಾದ್,
ಫೆ.20: ಆಂಧ್ರ ವಿಧಾನಸಭೆ ಸಚಿವಾಲಯದ ಎದುರು ಪುರಾತನ ವಿದ್ಯಾರಣ್ಯ ಹೈಸ್ಕೂಲಿನ ನೆಲಮಾಳಿಗೆಯಲ್ಲಿ 20,000 ಕೋಟಿ ರುಪಾಯಿ ಮೌಲ್ಯದ ನಿಧಿ ರಹಸ್ಯ ಇನ್ನೂ ಮುಂದುವರಿದಿದೆ. ನಿಧಿ ಜಾಗದತ್ತ ಸುರಂಗ ಮಾರ್ಗ ಅಗೆಯುವ ಕಾರ್ಯ ಮುಂದುವರಿದಿದೆ. id="toptextpromo">'ನಾನು
ಸುರಂಗದವರೆಗೂ ತೆರಳಿದ್ದೆ. ಅದರ ಪ್ರವೇಶ ದ್ವಾರ ತುಂಬಾ ಕಡಿದಾಗಿದೆ. ಅಲ್ಲಿಗೂ ಇನ್ನೂ ಮುಂದೆ ತೆರಳಿದೆವು. ಅಲ್ಲಿ ಕಬ್ಬಿಣದ ಗೇಟು ಕಾಣಿಸಿತು. ಅಲ್ಲಿಂದ ಮುಂದಕ್ಕೆ ಹೋಗುವ ಸಾಹಸ ಮಾಡಲಿಲ್ಲ ಅಷ್ಟೇ. ಸ್ಕೂಲಿನ ಹಿಂಭಾಗ ಕಲ್ಲುಬಂಡೆಗಳ ಪ್ರದೇಶವಿದೆ. ಅದನ್ನು ಕೊರೆಯುತ್ತಾ ಹೋದರೆ ಖಂಡಿತ ನಿಧಿಯಿರುವ ಜಾಗ ಪತ್ತೆಯಾಗುತ್ತದೆ' ಎಂದು ನಿಧಿಯಿರುವ ಬಗ್ಗೆ ಕೋರ್ಟಿನಲ್ಲಿ ಅಫಿಡವಿಟ್ ಸಲ್ಲಿಸಿರುವ ಟಿ.ಬಿ. ರಾಜು ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಗಮನಾರ್ಹವೆಂದರೆ
ಕೋಲ್ ಇಂಡಿಯಾ ಅಧಿಕಾರಿಯಾಗಿರುವ ರಾಜು ಈ ನಿಧಿಯನ್ನು ಕಣ್ಣಾರೆ ಕಂಡಿಲ್ಲ. ಆದರೆ ಸ್ಥಳೀಯ ಕಟ್ಟಡ ನಿರ್ಮಾಣಕಾರರು ಇದನ್ನು ನೋಡಿದ್ದು, ಖುದ್ದು ತಮಗೆ ಹೇಳಿರುವುದಾಗಿ ತಿಳಿಸಿದ್ದಾರೆ. ಅವರ ಪೈಕಿ ಮಲ್ಲೇಶ ಎಂಬಾತ ಸುರಂಗ ಮಾರ್ಗದ ಮಾರ್ಗದರ್ಶಕನಾಗಿದ್ದಾನೆ. ಆರ್ಕಿಯಾಲಜಿ ಡಿಮಾರ್ಟಿಮೆಂಟಿನವರು ನಿನ್ನೆ ಭಾನುವಾರ ಇಡೀ ದಿನ ಸುರಂಗ ಕೊರೆಯುವ ಕಾರ್ಯ ನಡೆಸಿದ್ದು, ರಾಜು, ಮಲ್ಲೇಶ ಮತ್ತಿತರರು ಇಡೀ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಸ್ಥಳದಲ್ಲಿ ಭಾರಿ ಪೊಲೀಸ್ ಭದ್ರತೆ ಹಾಕಲಾಗಿದೆ.











Click it and Unblock the Notifications