ಶೋಭಾ ಜತೆ ಕಾಶಿಯಲ್ಲಿ ಯಡಿಯೂರಪ್ಪ ಶಿವ ಪೂಜೆ
ವಾರಾಣಾಸಿ,
ಫೆ.20: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಪ್ರೀತಿಪಾತ್ರ ಶೋಭಾ ಕರಂದ್ಲಾಜೆ ಅವರ ಜತೆಗೂಡಿ ವಿಶೇಷ ವಿಮಾನದಲ್ಲಿ ಭಾನುವಾರ ಸಂಜೆ ಕಾಶಿಗೆ ಬಂದು ತಲುಪಿದ್ದಾರೆ. ಗಮನಾರ್ಹವೆಂದರೆ ಕಾಶಿಗೆ ಬಂದವರು ತಮ್ಮ 'ಪ್ರೀತಿಪಾತ್ರ'ವಾಗಿರುವುದನ್ನು ಇಲ್ಲಿಯೇ ಬಿಟ್ಟುಬರುವ ಸಂಪ್ರದಾಯವಿದೆ. id="toptextpromo">ಇದೇ
ವೇಳೆ ರಾಜ್ಯದ ಇಂಧನ ಸಚಿವೆ ಜತೆಗೆ ವಸತಿ ಸಚಿವ ವಿ ಸೋಮಣ್ಣ, ಬೆಳಗಾವಿ ಸಂಸದ ಸುರೇಶ್ ಅಂಗಡಿ ಅವರೂ ಯಡಿಯೂರಪ್ಪ ಅವರಿಗೆ ಜತೆಯಾಗಿದ್ದಾರೆ. ಮಹಾ ಶಿವರಾತ್ರಿ ಹಿನ್ನೆಲೆಯಲ್ಲಿ ಕಾಶಿ ವಿಶ್ವನಾಥನ ದರ್ಶನಕ್ಕೆ ಇವರು ಇಲ್ಲಿಗೆ ಬಂದಿದ್ದಾರೆ. ಮೂಲಗಳ ಪ್ರಕಾರ, ಯಡಿಯೂರಪ್ಪ ಮತ್ತು ಅವರ ಬೆಂಬಲಿಗ ಸಚಿವರು ಕಾಶಿಯಾತ್ರೆಯಿಂದ ಮಂಗಳವಾರ ವಾಪಸಾಗಲಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಯಡಿಯೂರಪ್ಪ
ಅವರು ಇಲ್ಲಿನ ಕಾಳಭೈರವೇಶ್ವರ ದೇವಸ್ಥಾನದಲ್ಲಿ ರಾತ್ರಿ 11 ಗಂಟೆಯಲ್ಲಿ ಪೂಜೆ ಸಲ್ಲಿಸಿದರು. ಕಾಶಿ ಪಂಡಿತರು ಯಡಿಯೂರಪ್ಪ ಅವರ ಪೂಜಾ ಕೈಂಕರ್ಯಕ್ಕೆ ನೆರವಾದರು. ಬಳಿಕ ಕಾಶಿ ವಿಶ್ವನಾಥನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಯಡಿಯೂರಪ್ಪ ಅವರು ಕಾಶಿಗೆ ಬಂದಿದ್ದು ಮನಸ್ಸಿಗೆ ತುಂಬಾ ನೆಮ್ಮದಿ ತಂದಿದೆ. ಇಲ್ಲಿ ಶಿವಪೂಜೆ ಸಲ್ಲಿಸುವುದರಿಂದ ಭವಿಷ್ಯದಲ್ಲಿ ರಾಜಕೀಯದಲ್ಲಿ ನನಗೆ ಇನ್ನಷ್ಟು ಒಳ್ಳೆಯದಾಗಲಿದೆ ಎಂಬ ನಂಬಿಕೆಯೂ ಇದೆ ಎಂದು ಹೇಳಿದ್ದಾರೆ.ಯಡಿಯೂರಪ್ಪ
ಮತ್ತು
ಅವರ
ಜತೆಗಿದ್ದ
ಗಣ್ಯರು
ಸೋಮವಾರ
ಬೆಳಗಿನ
ಜಾವ
3
ಗಂಟೆಗೆ
ಕಾಶಿ
ವಿಶ್ವನಾಥನ
ದರ್ಶನ
ಪಡೆದು
ವಿಶೇಷ
ಪೂಜೆ
ಸಲ್ಲಿಸಿದ್ದಾರೆ.












Click it and Unblock the Notifications