• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉಡುಪಿ ಚುನಾವಣೆಗೆ ಜೆಡಿಎಸ್ ನಿಂದ ನಟಿ ಪೂಜಾಗಾಂಧಿ?

By *ಬಾಲರಾಜ್ ತಂತ್ರಿ
|
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಹರಸಾಹಸಪಡುತ್ತಿರುವ ಮೂರು ರಾಜಕೀಯ ಪಕ್ಷಗಳು ಅಂತಿಮವಾಗಿ ಯಾರಿಗೆ ಬಿಫಾರಂ ನೀಡುತ್ತವೆ ಎನ್ನುವುದು ಚುನಾವಣಾ ಫಲಿತಾಂಶದಷ್ಟೇ ಕುತೂಹಲ.

ಈ ಕ್ಷೇತ್ರದಲ್ಲಿ ಮೇಲ್ನೋಟಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಇದ್ದರೂ, ಒಂದುವೇಳೆ ಜೆಡಿಎಸ್ ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಮತಗಳು ಹಂಚಿ ಹೋಗುವುದಂತೂ ಇಲ್ಲದಿಲ್ಲ. ಈ ಕ್ಷೇತ್ರದಲ್ಲಿ ಇನ್ನೊಂದು ಗಮನಿಸ ಬೇಕಾದ ಅಂಶವೇನಂದರೆ ಜಾತಿವಾರು ಲೆಕ್ಕಾಚಾರ ಇಲ್ಲಿ ಅಷ್ಟು ವರ್ಕ್ ಔಟ್ ಆಗುವುದಿಲ್ಲ. ಇಲ್ಲಿ ಏನಿದ್ದರೂ ಪಕ್ಷದ ಚಿಹ್ನೆಯ ಮೇಲೆ ನಡೆಯುವ ನೇರ ಸಮರ.

ಸದ್ಯಕ್ಕೆ ಜೆಡಿಎಸ್ ನಿಂದ ಚಾಲ್ತಿಯಲ್ಲಿರುವ ಹೆಸರು ಮಧು ಬಂಗಾರಪ್ಪ. ಮಾಜಿ ಸಿಎಂ ಬಂಗಾರಪ್ಪ ಅವರ ನಿಧನ, ಬೀದಿರಂಪವಾದ ಕುಮಾರ ಸಹೋದರರ ಮನೆಜಗಳ ಇದೆಲ್ಲಾ ಅನುಕಂಪದ ಅಲೆಯಲ್ಲಿ ಪಕ್ಷಕ್ಕೆ ಮತಗಳಾಗಿ ಪರಿವರ್ತನೆಯಾಗುವುದು ಕಷ್ಟ ಎನ್ನುವುದು ದೇವೇಗೌಡರಿಗೆ ತಿಳಿಯದ ವಿಚಾರವೇನೂ ಅಲ್ಲ.

ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕನ್ನಡಕ್ಕಿಂತ ಹಿಂದಿ influence ಜಾಸ್ತಿ. ಹಾಗಂತ ಕನ್ನಡದ ಮೇಲೆ ಅಭಿಮಾನ ಕಮ್ಮಿಯೆಂದು ಹೇಳುತ್ತಿಲ್ಲ. ಈ ವಿಷಯ ಏನಕ್ಕೆ ಪ್ರಸ್ತಾಪಿಸುತ್ತಿದ್ದೇವೆ ಎಂದರೆ ಒಂದು ವೇಳೆ ಮಳೆಹುಡುಗಿ ಪೂಜಾಗಾಂಧಿ ಈ ಕ್ಷೇತ್ರದಲ್ಲಿ ಕಣಕ್ಕಿಳಿದರೆ ಎನ್ನುವ ಪ್ರಶ್ತ್ನೆ? ಮುಂಗಾರುಮಳೆ ಚಿತ್ರ ಈ ಭಾಗದಲ್ಲಿ ಕನ್ನಡ ಚಿತ್ರಕ್ಕೆ ಹೆಚ್ಚಿನ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾದ ಚಿತ್ರ, ಈ ಚಿತ್ರದ ನಂತರ ಹೆಚ್ಚಿನ ಕನ್ನಡ ಚಿತ್ರಗಳು ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಯಲ್ಲೂ ಏಕಕಾಲದಲ್ಲಿ ಬಿಡುಗಡೆಗೊಳ್ಳುತ್ತಿದೆ. ಅದು ಕನ್ನಡ ಚಿತ್ರದ ಮೇಲಿನ ಅಭಿಮಾನವೋ ಅಥವಾ ಇತ್ತೀಚಿಗೆ ಬರುತ್ತಿರುವ ಹಿಂದಿ ಚಿತ್ರಗಳು ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗುತ್ತಿದೆಯೋ ಅದರ ಬಗ್ಗೆ ಕೂಲಂಕುಷ ಚರ್ಚೆ ಇಲ್ಲಿ ಬೇಡ.

ಆದರೆ ಪೂಜಾಗಾಂಧಿ ಅಭಿನಯದ ಮುಂಗಾರುಮಳೆ ಚಿತ್ರ ಈ ಭಾಗದಲ್ಲಿ ಮುಖ್ಯವಾಗಿ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕನ್ನಡ ಚಿತ್ರಕ್ಕೆ ಹೊಸಹೊಸ ಪ್ರೇಕ್ಷಕರನ್ನು ಸೆಳೆಯುವಲ್ಲಿ ಖಂಡಿತ ಯಶಸ್ವಿಯಾಗಿತ್ತು ಎನ್ನುವುದರಲ್ಲಿ ಅನುಮಾನವೇ ಬೇಡ. ಒಂದೊಂದು ರಾಜಕೀಯ ನಡೆಯ ಹಿಂದೆ ತನ್ನದೇ ತಂತ್ರಗಾರಿಕೆ ರೂಪಿಸುವ ದೇವೇಗೌಡ ಅಂಡ್ ಸನ್ಸ್ ಈ ರೀತಿಯ ಹೆಜ್ಜೆ ಇಟ್ಟರೆ ಖಂಡಿತ ಆಶ್ಚರ್ಯ ಪಡಬೇಕಾಗಿಲ್ಲ.

ಒಂದು ವೇಳೆ ಪೂಜಾಗಾಂಧಿ ಕಣಕ್ಕಿಳಿದರೆ ಬಿಜೆಪಿ ಮತ್ತು ಕಾಂಗ್ರೆಸ್ ಈ ಅಭ್ಯರ್ಥಿಯನ್ನು ಸೀರಿಯಸ್ ಆಗಿ ಲೆಕ್ಕಕ್ಕೆ ತೆಗೆದುಕೊಳ್ಳಲೇ ಬೇಕಾಗುತ್ತದೆ. ಯಾರ ಮತ ಯಾರಿಗೆ ಹಂಚಿ ಹೋಗುತ್ತೆ ಎನ್ನುವುದು ಕಷ್ಟದ ಲೆಕ್ಕಾಚಾರ. ಏಕೆಂದರೆ ಸೆಲೆಬ್ರಿಟಿಗಳು ಮತ ಕೇಳಲು ಬಂದರೆ ಮುಖ್ಯವಾಗಿ ಮಹಿಳಾ ಮತ್ತು ಯುವ ಮತದಾರರು ಚಿತ್ತ ಡೈವರ್ಟ್ ಆದರೂ ಆಗಬಹುದು.

ಎಂಟು ಬಾರಿ ಪಾರ್ಲಿಮೆಂಟ್ ಗೆ ಆಯ್ಕೆಯಾಗಿದ್ದ ಹೇಮವತಿ ನಂದನ್ ಬಹುಗುಣ ಅವರನ್ನು ಅಲಹಾಬಾದ್ ಕ್ಷೇತ್ರದಲ್ಲಿ ಅಮಿತಾಬ್ ಸೋಲಿಸಲಿಲ್ಲವೇ? ಅದೇ ರೀತಿ ಮುಂಬೈಉತ್ತರ ಕ್ಷೇತ್ರದಲ್ಲಿ ಐದು ಬಾರಿ ಗೆದ್ದಿದ್ದ ರಾಮಾನಾಯಕ್ ಅವರನ್ನು ನಟ ಗೋವಿಂದ್ ಸೋಲಿಸಲಿಲ್ಲವೇ? ಇಲ್ಲಿ ವರ್ಕ್ ಔಟ್ ಆಗಿದ್ದು Just they are a celebrities.

ಅಂತಿಮವಾಗಿ ಈ ಕ್ಷೇತ್ರದಲ್ಲಿ ಚಾಣಾಕ್ಷ ದೇವೇಗೌಡರ ನಡೆ ಇತರ ಪಕ್ಷಗಳ ನಾಡಿಬಡಿತ ಹೆಚ್ಚುವಂತೆ ಮಾಡುತ್ತಿವೆ ಎಂದರೆ ತಪ್ಪಾಗಲಾರದು. ಈ ಮಧ್ಯೆ ಈ ಭಾಗದ ಮತ್ತೊಬ್ಬ ಪ್ರಭಾವಿ ಕಾಂಗ್ರೆಸ್ ನಾಯಕ ಮತ್ತು ಟಿಕೆಟ್ ಆಕಾಂಕ್ಷಿ ವಿನಯ್ ಕುಮಾರ್ ಸೊರಕೆ ಅವರನ್ನು ತನ್ನತ್ತ ಸೆಳೆಯುವ ಕೆಲಸಕ್ಕೆ ಜೆಡಿಎಸ್ ಕೈಹಾಕಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಉಪ ಚುನಾವಣೆ ಸುದ್ದಿಗಳುView All

English summary
How about JDs fielding Kannada actress Pooja Gandhi for the udupi-chikmanglur bi polls? JDs has no popular vote base in the constituency. Hence, fielding a film personality would add not only color to the election but also can give fight to BJP and Congress candidates.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more