ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವರಾತ್ರಿಯಂದು ಭಕ್ತರಿಗೆ ದರ್ಶನ ನೀಡಿದ ಮಾತಾಜಿ

By * ಸಾಗರ ದೇಸಾಯಿ, ಯಾದಗಿರಿ
|
Google Oneindia Kannada News

Mataji Manikeshwari blesses otees on Shivaratri
ಯಾದಗಿರಿ, ಫೆ. 20 : ಕಳೆದ ಎರಡು ವರ್ಷಗಳಿಂದ ಭಕ್ತಾದಿಗಳಿಗೆ ದರುಶನವನ್ನೇ ನೀಡದಿದ್ದ 78 ವರ್ಷದ ಮಾತೆ ಮಾಣಿಕೇಶ್ವರಿ ಅವರು ಮಹಾಶಿವರಾತ್ರಿಯಂದು ಯಾನಗುಂದಿಯಲ್ಲಿ ಸಾವಿರಾರು ಭಕ್ತರಿಗೆ ದರ್ಶನ ನೀಡಿದರು. ಸುಮಾರು ಅರ್ಧ ಗಂಟೆ ಕಾಲ ಅವರು ಭಕ್ತರನ್ನು ಆಶೀರ್ವದಿಸಿದರು.

ಗುಲ್ಬರ್ಗಾ ಜಿಲ್ಲೆಯ ಸೇಡಂ ತಾಲ್ಲೂಕಿನ ಸುಕ್ಷೇತ್ರ ಯಾನಗುಂದಿಯಲ್ಲಿ ಅಮ್ಮ ಮಾಣಿಕೇಶ್ವರಿ ಮಾತೆ ಬೆಳಿಗ್ಗೆ 9.10ಕ್ಕೆ ಸೂರ್ಯನಂದಿ ಕ್ಷೇತ್ರ ಬೆಟ್ಟದಲ್ಲಿ ಭಕ್ತರಿಗೆ ಕಾಣಿಸಿಕೊಂಡರು. ಹಲವಾರು ವರ್ಷಗಳಿಂದ ಗುಹೆಯಲ್ಲಿಯೇ ವಾಸಿಸುವ ಮಾತೆ ಯಾವ ಸಂದರ್ಭದಲ್ಲಿಯೂ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದಿಲ್ಲ. ಹಾಲು ಹಣ್ಣು ಮಾತ್ರ ಅವರ ಆಹಾರ, ಧ್ಯಾನವೇ ಬದುಕು.

ಆಂಧ್ರಪ್ರದೇಶ, ಮಹಾರಾಷ್ಟ್ರ, ಹಾಗೂ ರಾಜ್ಯದ ನಾನಾ ಜಿಲ್ಲೆಗಳಿಂದ ಸುಮಾರು 5 ಸಾವಿರಕ್ಕೂ ಹೆಚ್ಚು ಜನ ಭಕ್ತರು ಅಲ್ಲಿ ಬಂದು ಸೇರಿದ್ದರು. ಮಾತೆ ದರ್ಶನ ನೀಡುತ್ತಿದ್ದಂತೆ ಎಲ್ಲೆಲ್ಲೂ ಜೈಜೈಕಾರ ಕೇಳಿಬರುತ್ತಿತ್ತು. ಮಾತಾಜಿ ದರ್ಶನಕ್ಕೆ ಆಗಮಿಸಿದ ಎಲ್ಲ ಭಕ್ತರಿಗೆ ಪ್ರಸಾದ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. (ಒನ್ಇಂಡಿಯಾ ಕನ್ನಡ ವಾರ್ತೆ)

English summary
Mataji Manikeshwari blesses devotees on Shivaratri festival at Suryanandi hill in Yanagundi in Gulbarga district. Mate Manikeshwari never appears in public except on Shivaratri.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X