• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹೈದರಾಬಾದ್ ಸಂಪತ್ತು ವನಪರ್ತಿ ರಾಜಮನೆತನದ್ದಾ?

By Srinath
|

ಹೈದರಾಬಾದ್, ಫೆ.19: ಇದು ಯಾವುದೋ ತೆಲುಗು ಸಿನಿಮಾ ಕಥೆಯಲ್ಲ. ಆಂಧ್ರ ವಿಧಾನಸಭೆ ಸಚಿವಾಲಯದ ಎದುರು ಪುರಾತನ ವಿದ್ಯಾರಣ್ಯ ಪಾಠಶಾಲೆಯ ನೆಲಮಾಳಿಗೆಯಲ್ಲಿ 20,000 ಕೋಟಿ ರುಪಾಯಿ ಮೌಲ್ಯದ ಸಂಪತ್ತು ಇರುವುದನ್ನು ಮೊದಲು ನೋಡಿರುವುದು ಮಲ್ಲೇಶ ಎಂಬ ವ್ಯಕ್ತಿ. ಶಾಲೆಯ ನೆಲದಡಿ ಸುರಂಗ ಮಾರ್ಗದಲ್ಲಿ ಮಲ್ಲೇಶನಿಗೆ ಇದು ಕಂಡಿದ್ದಾದರೂ ಏನು?

ವೆಲ್! ಶಾಲೆಯ ಕೆಳಗೆ ಈ ಅತಿಲೋಕದಲ್ಲಿ ಮಾಸೊನ್ ಗೆ ಮೊದಲು ಎರಡು ಅಲ್ಮೆರಾಗಳು ಕಣ್ಣಿಗೆ ಬಿದ್ದಿವೆ. ಅವುಗಳ ತುಂಬಾ ಬರೀ ವಜ್ರ ವೈಢೂರ್ಯ ಚಿನ್ನಾಭರಣಗಳೇ ಕಂಡಿವೆ. ಪ್ರಸ್ತುತ, ನಿಧಿಯೆನ್ನಲಾದ 100 ವರ್ಷಗಳ ಹಳೆಯ ಶಾಲೆಯ ಹಿಂಭಾಗದಲ್ಲಿ ಹೈದರಾಬಾದಿನಲ್ಲಿ ಖ್ಯಾತ ಬಿರ್ಲಾ ಮಂದಿರ ಬೆಟ್ಟವಿದೆ. ನಗರದ ಮತ್ತೊಂದು ಹೆಗ್ಗುರುತಾದ ಹುಸೇನ್ ಸಾಗರವೂ ಅನತಿ ದೂರಲ್ಲೆ ಇದೆ.

ಇದೇ ವೇಳೆ, ಒಂದು ವೇಳೆ ಇಲ್ಲಿ ಅನಂತು ಸಂಪತ್ತು ಪತ್ತೆಯಾದರೆ Treasure Trove Act 1878 ಕಾಯಿದೆಯಡಿ ತಮಗೂ 1/5 ಭಾಗದಷ್ಟು ಪಾಲು ನೀಡಬೇಕು ಎಂದು ಕೋರ್ಟಿನಲ್ಲಿ ಅಫಿಡವಿಟ್ ಸಲ್ಲಿಸಿರುವ ಟಿ.ಬಿ. ರಾಜು ನೇತೃತ್ವದ ಹಿರಿಯ ನಾಗರಿಕರ ತಂಡ ಅಲವತ್ತುಕೊಂಡಿದೆ.

ಈ ಶಾಲೆಯ ಹಿಂಭಾಗದಲ್ಲಿರುವ ದೊಡ್ಡ ಗೋಡೆಯ ಕೆಳಗೆ ನೆಲಮಾಳಿಗೆಯಿದೆ. ಗುಹೆಯಂತಿರುವ ಆ ಜಾಗಕ್ಕೆ ತೆರಳಲು ಸುರಂಗ ಮಾರ್ಗವಿದೆ. ದ್ವಾರದಲ್ಲಿ ಕಡಿದಾದ ಮೆಟ್ಟಿಲುಗಳಿವೆ. ಅದರ ಮೂಲಕ ಸಾಗಿ ಮಾಸೋನ್ ಆ ಎರಡೂ ಅಲ್ಮೆರಾಗಳನ್ನು ನೋಡಿದ್ದಾರೆ. ಅದು 12x 12 ಅಡಿ ಸುರಂಗ. ಆಂಧ್ರ ಪುರಾತನ ಸಂಪತ್ತು ನಿರ್ವಹಣೆ ಅಧಿಕಾರಿ ಪ್ರ. ಪಿ. ಚನ್ನಾರೆಡ್ಡಿ ಮೇಲುಸ್ತುವಾರಿಯಲ್ಲಿ ಇಲ್ಲಿ ಸುರಂಗ ಕೊರೆಯುವ ಕಾರ್ಯ ನಡೆಯುತ್ತಿದೆ.

ಈ ಶಾಲೆಯು ವನಪರ್ತಿ ಸಂಸ್ಥಾನದ ರಾಜಮನೆತನಕ್ಕೆ ಸೇರುತ್ತದೆ. ಅತ್ಯಂತ ಶ್ರೀಮಂತವಾಗಿದ್ದ ಈ ರಾಜಮನೆತನದವರು ಒಂದು ಕಾಲದಲ್ಲಿ ಒಂದು ಲಕ್ಷ ಎಕರೆ ಭೂಮಿಯ ಒಡೆಯರಾಗಿದ್ದರು. ಆದ್ದರಿಂದ ಅವರು ಶಾಲೆಯ ನೆಲಮಾಳಿಗೆಯಲ್ಲಿ ಅಪಾರ ಪ್ರಮಾಣದ ಸಂಪತ್ತನ್ನು ಶೇಖರಿಸಿಟ್ಟಿರಬಹುದು ಎಂದು ಅಂದಾಜಿಸಲಾಗಿದೆ.

12 ಕಬ್ಬಿಣದ ಪೆಟ್ಟಿಗೆಗಳು : ಇತಿಹಾಸಕಾರ ಡಾ. ಮೊಹಮದ್ ಸೈಫುಲ್ಲಾ ಅವರು ಹೇಳುವಂತೆ ಅನೇಕ ಶ್ರೀಮಂತ ಕುಟುಂಬಸ್ಥರು 2ನೇ ಜಾಗತಿಕ ಯುದ್ಧದಲ್ಲಿ ಜಪಾನಿನ ಎದಿರೇಟು ತಾಳಲಾರದೆ ಬಂಕರ್ ಗಳನ್ನು ನಿರ್ಮಿಸಿ ತಮ್ಮಲ್ಲಿದ್ದ ಅಮೂಲ್ಯ ಸಂತ್ತನ್ನು ಶೇಖರಿಸಿಡುತ್ತಿದ್ದರು. ಈಗ ಶಾಲೆಯ ನೆಲಮಾಳಿಗೆಯಲ್ಲಿ ಇದೆಯೆನ್ನಲಾದ ಸಂಪತ್ತೂ ಅದರಲ್ಲಿ ಒಂದಾಗಿರಬಹುದು. ಅವರ ಈ ಮಾತಿಗೆ ಪುಷ್ಠಿ ನೀಡುವಂತೆ ನಗರದ ಸೈಫಾಬಾದಿನಲ್ಲಿರುವ ಹೋಂ ಸೈನ್ಸ್ ಕಾಲೇಜಿನ ಬಳಿ ಇಂತಹ ಒಂದು ಬಂಕರ್ ಅನ್ನು ಈ ಹಿಂದೆ ಪತ್ತೆಹಚ್ಚಲಾಗಿತ್ತು. ಅದೇ ರೀತಿ ಮಿಂಟ್ ಕಾಂಪೌಂಡ್ ಬಳಿಯೂ ಇಂತಹ ಬಂಕರ್ ಇತ್ತು. ಈ ಎರಡೂ ಬಂಕರುಗಳಲ್ಲಿ 12 ಕಬ್ಬಿಣದ ಪೆಟ್ಟಿಗೆಗಳು ಸಿಕ್ಕಿದ್ದವಾದರೂ ಅವೆಲ್ಲ ಬರಿದಾಗಿದ್ದವು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A major treasure hunt is on (started at 6 am, Feb 19) opposite the Andhra Pradesh Secretariat and estimaters put the treasure’s worth upward of Rs 20,000 crore. It is claimed that Hyderabad Vidyaranya High School treasure belongs to Wanaparthi Samsthan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more