ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1.4 ಕೋಟಿ ದಾಖಲೆ ದಂಡ ವಸೂಲಿ, ಭಲೇ ಎಸಿಪಿ ಸಲೀಂ

By Mahesh
|
Google Oneindia Kannada News

ACP Saleem
ಬೆಂಗಳೂರು, ಫೆ.17: ಕಳೆದ 43 ದಿನಗಳಲ್ಲಿ ಸುಮಾರು 69,661 ಸಂಚಾರ ನಿಯಮ ಮುರಿದ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ದಂಡ ರೂಪದಲ್ಲಿ ಸುಮಾರು 1.4 ಕೋಟಿ ರು ವಸೂಲಿ ಮಾಡಲಾಗಿದೆ ಎಂದು ಎಸಿಪಿ(ಟ್ರಾಫಿಕ್ ಮತ್ತು ಸುರಕ್ಷತೆ)ಡಾ ಎಂಎ ಸಲೀಂ ಹೇಳಿದ್ದಾರೆ.

ಬೆಂಗಳೂರು ಟ್ರಾಫಿಕ್ ಪೊಲೀಸ್ ಹೊಸ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ಸಂಚಾರ ದಟ್ಟಣೆ ಕಮ್ಮಿ ಮಾಡುವತ್ತ ಸಾಗಿದೆ. ಕಂಟ್ರೋಲ್ ರೂಮ್ ನಲ್ಲೇ ಕೂತು ಸಂಚಾರಿ ನಿಯಮಗಳನ್ನು ಪಾಲಿಸದ ವಾಹನ ಸವಾರರ ಮೇಲೆ ನಿಗಾ ವಹಿಸಬಹುದಾಗಿದೆ.

'ತಂತ್ರಜ್ಞಾನದ ಜೊತೆಜೊತೆಗೆ ನಾವು ಬೆಳೆಯಬೇಕು. ನಮ್ಮ ಇಲಾಖೆಯಲ್ಲಿ ಅನೇಕ ಬದಲಾವಣೆಗಳನ್ನು ತರಲು ಉನ್ನತ ತಂತ್ರಜ್ಞಾನ ಹಾಗೂ ಸಾಧನಗಳು ಕಾರಣ' ಎಂದು ಸಲೀಂ ಹೇಳುತ್ತಾರೆ.

ಪ್ರತಿ ಕ್ಷಣ ಸಿಸಿಟಿವಿ ಕ್ಲಿಪ್ಪಿಂಗ್ ಗಳನ್ನು ದಾಖಲಿಸಿಕೊಳ್ಳಲಾಗುತ್ತೆ. ಸಂಚಾರಿ ನಿಯಮ ಮೀರಿದರೆ ಪ್ರಕರಣ ದಾಖಲಿಸಿಕೊಂಡು ದಂಡ ವಸೂಲಿ ಮಾಡಲಾಗುತ್ತಿದೆ. ಎಸ್ ಎಂಎಸ್, ವಿಡಿಯೋ ರೆಕಾರ್ಡ್, ಇನ್ಫ್ರಾ ರೆಡ್ ಧ್ವನಿ ಮುದ್ರಿಕೆ ಹಾಗೂ 280ಕ್ಕೂ ಅಧಿಕ ಬ್ಲ್ಯಾಕ್ ಬೆರ್ರಿ ಫೋನ್ ಗಳನ್ನು ಬಳಸಿ ಸಂಚಾರ ಸುಗಮಗೊಳಿಸಲು ಪಣ ತೊಟ್ಟಿದ್ದೇವೆ ಎಂದು ಎಸಿಪಿ ಸಲೀಂ ಹೇಳಿದ್ದಾರೆ.

ಕಳೆದ ವರ್ಷ 827 ಲೈಸನ್ಸ್ ಗಳನ್ನು ರದ್ದುಗೊಳಿಸಲಾಗಿದೆ. ಸುಮಾರು 50 ಕೋಟಿ ರು ಗೂ ಅಧಿಕ ದಂಡ ವಸೂಲಿ ಮಾಡಿದ್ದ ಬಿಟಿಪಿಗೆ ಗೋಲ್ಡನ್ ಪಿಕಾಕ್ ಪ್ರಶಸ್ತಿ ಕೂಡಾ ಲಭಿಸಿತ್ತು. ಕಳೆದ ಡಿಸೆಂಬರ್ ನಲ್ಲಿ ಒಂದೇ ದಿನದಲ್ಲಿ 727 ಸಂಚಾರಿ ನಿಯಮ ಮುರಿದ ಪ್ರಕರಣಗಳು ದಾಖಲಾಗಿತ್ತು.

ಪ್ರಸಕ್ತ ವರ್ಷ 40 ದಿನಗಳಲ್ಲಿ 324 ಲೈಸನ್ ಸಂಬಂಧಿತ ಪ್ರಕರಣಗಳು ದಾಖಲಾಗಿದೆ. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಶಿಫಾರಸ್ಸಿನ ನಂತರ ಇನ್ನೂ 300ಕ್ಕೂ ಅಧಿಕ ಬ್ಲ್ಯಾಕ್ ಬೆರ್ರಿಗಳನ್ನು ಟ್ರಾಫಿಕ್ ಪೊಲೀಸರು ಹೊಂದಲಿದ್ದಾರೆ ಎಂದು ಸಲೀಂ ಹೇಳಿದರು.

English summary
Thanks to Additional Commissioner of Police (Traffic and Security), Dr MA Saleem, who has introduced several new initiatives, innovative idea to curb the traffic menace in garden city. The Bangalore Traffic Police in the last 43 days, have booked 69,661 traffic violation cases and collected a whopping Rs 1.4 crore penalty from violators.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X