ನಾರಾಯಣ ಹೃದಯಾಲಯ, ರೆಡ್ ಬಸ್ ಗೆ ಯುಎಸ್ ಗೌರವ

ವಿಶ್ವದ ಪ್ರಮುಖ 50 innovative ಕಂಪನಿಗಳ ಪಟ್ಟಿಯಲ್ಲಿ ನಾರಾಯಣ ಹೃದಯಾಲಯ 36ನೇ ಸ್ಥಾನ ಪಡೆದಿದೆ ಹಾಗೂ ರೆಡ್ ಬಸ್ 48ನೇ ಸ್ಥಾನ ಗಳಿಸಿದೆ. (ನಾರಾಯಣ ಹೃದಯಾಲಯ ಈ ಮಗುವಿಗೆ ಉಚಿತ ಚಿಕಿತ್ಸೆ ನೀಡಲಿ)
ಡಾ. ದೇವಿಶೆಟ್ಟಿ ನೇತೃತ್ವದ ನಾರಾಯಣ ಹೃದಯಾಲಯದಲ್ಲಿ ಕಡು ಬಡವರಿಗೂ ಉನ್ನತ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ದೇಶ ವಿದೇಶಗಳಿಂದ ಬರುವ ರೋಗಿಗಳಿಗೆ ಕಡಿಮೆ ವೆಚ್ಚದಲ್ಲಿ ಸೂಕ್ತ ಚಿಕಿತ್ಸೆ ಕಲ್ಪಿಸಲಾಗುತ್ತಿದೆ ಎಂದು ಯುಎಸ್ ಮ್ಯಾಗಜೀನ್ ಹೇಳಿದೆ.
ನಾರಾಯಣ ಹೃದಯಾಲಯವನ್ನು ಹೊಗಳುತ್ತಾ "Wal-Mart meets Mother Teresa" ಎನ್ನಲಾಗಿದೆ. ಸಂಸ್ಕೃತದಲ್ಲಿರುವ ಆಸ್ಪತ್ರೆಯ ಹೆಸರಿನ ಅರ್ಥ "God's compassionate home". ಎಂದಾಗಿದೆ.
ರೆಡ್ ಬಸ್: ಈ ಸಂಸ್ಥೆ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಸೇವೆ ಆರಂಭಿಸಿದ ಕಥೆ ಕುತೂಹಲವಾಗಿದೆ. ಫಣೀಂದ್ರ ಸಾಮಾ ಅವರು ವಾರಾಂತ್ಯದಲ್ಲಿ ತಮ್ಮ ಊರಿಗೆ ಹೋಗಲು ಮೆಜೆಸ್ಟಿಕ್ ಗೆ ಬಂದಿದ್ದಾರೆ. ಆದರೆ, ಮುಂಗಡವಾಗ ಟಿಕೇಟ್ ಬುಕ್ ಮಾಡದ ಕಾರಣ ಸರ್ಕಾರಿಯಾಗಲಿ, ಖಾಸಗಿ ಬಸ್ ಆಗಲಿ ಸಿಗದೇ ಪರದಾಡಿದ್ದಾರೆ. ತಕ್ಷಣವೇ ರೆಡ್ ಬಸ್ ಆನ್ ಲೈನ್ ಬುಕ್ಕಿಂಗ್ ಕಲ್ಪನೆ ಹೊಳೆದಿದೆ.
ಒಂದೇ ಬಾರಿ ವಿವಿಧ ಬಸ್ ಸಂಸ್ಥೆಗಳ ಬಸ್ ಗಳಲ್ಲಿ ಖಾಲಿ ಇರುವ ಸೀಟುಗಳ ವಿವರ ಪಡೆಯಬಹುದಾಗಿದೆ. ರೆಡ್ ಬಸ್ ಮೂಲಕ ಆನ್ ಲೈನ್ ಟಿಕೆಟ್ ಕಾಯ್ದಿರಿಸುವಿಕೆ ವ್ಯವಸ್ಥೆ ಜನ ಮೆಚ್ಚುಗೆ ಗಳಿಸಿದೆ.
ಭಾರತದ ಇನ್ನೋವೇಟಿವ್ ಕಂಪನಿಗಳ ಪಟ್ಟಿಯಲ್ಲಿ ವಿಪ್ರೋ ಹಾಗೂ ಫಿಲ್ಪ್ ಕಾರ್ಟ್ ಸ್ಥಾನ ಪಡೆದಿದೆ ಎಂದು ಫಾಸ್ಟ್ ಕಂಪನಿ ಮ್ಯಾಗಜೀನ್ ಹೇಳಿದೆ.












Click it and Unblock the Notifications