ಸ್ಪೀಕರ್ ಕೈಗೆ ಡರ್ಟಿ ಮಿನಿಸ್ಟರ್ಸ್ ಜಂಟಲ್ ಉತ್ತರ

ಕರಡಿ ಸಂಗಣ್ಣ ಹಾಗೂ ಹಾಲಪ್ಪಚಾರ್ ಮೂಲಕ ಲಕ್ಷ್ಮಣ ಸವದಿ ಹಾಗೂ ಸಿಸಿ ಪಾಟೀಲ್ ಅವರು ತಮ್ಮ ಉತ್ತರವನ್ನು ಸ್ಪೀಕರ್ ಕೆಜಿ ಬೋಪಯ್ಯ ಅವರಿಗೆ ನೇರವಾಗಿ ರವಾನಿಸಿದ್ದಾರೆ.
ಆದರೆ, ಮಾಜಿ ಸಚಿವ ಕೃಷ್ಣ ಪಾಲೇಮಾರ್ ಅವರು ತಮ್ಮ ಆಪ್ತ ಸಹಾಯಕ ಮೂಲಕ ಉತ್ತರವನ್ನು ವಿಧಾನಸಭಾ ಕಾರ್ಯದರ್ಶಿ ಓಂಪ್ರಕಾಶ್ ಅವರಿಗೆ ಸಲ್ಲಿಸಿದ್ದಾರೆ.
ವಿಧಾನಸೌಧ ಪೊಲೀಸರು ತಮ್ಮ ವರದಿಯನ್ನು ಕೋರ್ಟ್ ಗೆ ಬುಧವಾರ(ಫೆ.15) ಸಲ್ಲಿಸಿ, ಎಫ್ ಐಆರ್ ದಾಖಲಿಸಲು ಇರುವ ತೊಡಕನ್ನು ಕೋರ್ಟ್ ಗೆ ವಿವರಿಸಿದ್ದರು.
ನಂತರದ ಬೆಳವಣಿಗೆಯಲ್ಲಿ ಆರೋಪಿ ಸಚಿವರುಗಳಿಗೆ ಅವಧಿಗೆ ಮುನ್ನವೇ ಉತ್ತರ ನೀಡುವಂತೆ ಸ್ಪೀಕರ್ ಬೋಪಯ್ಯ ಅವರು ಸೂಚಿಸಿದ್ದರು. ಈ ಮುಂಚೆ ನೋಟಿಎಸ್ ಗೆ ಉತ್ತರಿಸಲು ಒಂದು ವಾರಗಳ ಅವಕಾಶ ನೀಡಲಾಗಿತ್ತು.












Click it and Unblock the Notifications