ಬೆಳ್ತಂಗಡಿಯಲ್ಲಿ ಮತ್ತೆ ಲವ್ ದೋಖಾ ಕೇಸ್

ಉಜಿರೆಯಲ್ಲಿ ಆರೋಗ್ಯ ಸಹಾಯಕಿಯಾಗಿ ಕೆಲಸ ನಿರ್ವಹಿಸುತ್ತಿರುವ ಯುವತಿಗೂ ಮೆಡಿಕಲ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಕಾಸರಗೋಡು ಮೂಲದ ಶಿವರಾಮ್ ಪ್ರಸಾದ್ ಗೂ ಒಂದು ವರ್ಷ ಹಿಂದಿನಿಂದ ಲವ್ವಿ ಡವ್ವಿ ನಡೆದಿದೆ.
ನಂತರ ಇಬ್ಬರೂ ಒಟ್ಟಿಗೆ ವಾಸಿಸುತ್ತಿದ್ದರು. ಹೆಚ್ಚಿನ ಜನಕ್ಕೆ ಇವರಿಗೆ ಮದುವೆಯಾಗಿಲ್ಲ ಎಂಬ ವಿಷಯ ತಿಳಿದಿರಲಿಲ್ಲ. ಯುವತಿಯೊಂದಿಗೆ ಇದ್ದಷ್ಟು ಸಮಯ ಅವಳಿಂದ ಲಕ್ಷಾಂತರ ರೂ. ಪೀಕಿಸಿದ ನಂತರ ಶಿವರಾಮ್ ನಾಪತ್ತೆಯಾಗಿದ್ದಾನೆ.
ಯುವತಿ ಮಾಡಿದ ತಪ್ಪು ಕೆಲಸ: ಶಿವರಾಮ್‌ನನ್ನು ಗಂಡ ಎಂದೇ ಸ್ವೀಕರಿಸಿರುವ ಯುವತಿ ತನ್ನ ಎಲ್ಲ ದಾಖಲೆಗಳಲ್ಲೂ ಆತನ ಹೆಸರನ್ನೇ ಬರೆಸಿದ್ದಾಳೆ. ಈಗ ಶಿವರಾಮ್ ಎಲ್ಲಿದ್ದಾನೆ ಎಂಬುದೇ ಗೊತ್ತಿಲ್ಲ. ಒಂದು ವರ್ಷದ ಹಿಂದೆಯೇ ಯುವತಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಜೊತೆಗೆ ಶಿವರಾಮನಿಗೆ ಬೇರೋಬ್ಬ ಯುವತಿಯಿಂದ ಆಗಾಗ ಮೆಸೇಜ್, ಕರೆ ಬರುತ್ತಾ ಇತ್ತು ಎಂಬುದು ತಿಳಿದು ಬಂದಿದೆ. ಬೆಳ್ತಂಗಡಿ ಪೊಲೀಸರಿಂದ ಪತ್ತೆ ಕಾರ್ಯ ಸಾಧ್ಯವಾಗದೆ ಇದ್ದುದರಿಂದ ಹತಾಶಳಾದ ಯುವತಿ ಬೆಂಗಳೂರಿನ ಮಹಿಳಾ ಸಂರಕ್ಷಣಾ ಸಮಿತಿಯ ಸಹಾಯ ಕೋರಿದ್ದಳು.
ಈಗ ಪ್ರಕರಣದ ಕುರಿತು ತನಿಖೆ ನಡೆಸುವ ಭರವಸೆಯನ್ನು ಬೆಳ್ತಂಗಡಿ ಪೊಲೀಸರು ನೀಡಿದ್ದಾರೆ. ಶಿವರಾಮ್ ಎಲ್ಲಿದ್ದಾನೆ ಎಂಬ ವಿಷಯ ಆತನ ಮನೆಯವರಿಗೂ ಗೊತ್ತಿಲ್ಲ.












Click it and Unblock the Notifications