ರೆಡ್ಡಿಗೆ ಬೆಂಬಿಡದಂತೆ ಕಾಡುತ್ತಿರುವ ಬಂಧನ ಭೀತಿ

ಇದರ ಜೊತೆಗೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್ ಶೀಟ್ ತಯಾರಿಸಿರುವ ಸಿಬಿಐ ತಂಡ ಏ.2ರೊಳಗೆ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸುವ ಸಾಧ್ಯತೆಯಿದೆ.
ದೋಷಾರೋಪಣ ಪಟ್ಟಿಯಲ್ಲಿ ಜಗನ್ ರನ್ನು ಆರೋಪಿ ನಂ.1 ಎಂದು ಹೆಸರಿಸಲಾಗಿದೆ. ವಿಜಯ ಸಾಯಿ ರೆಡ್ಡಿಯನ್ನು ಆರೋಪಿ ನಂ.2 ಎಂದು ಗುರುತಿಸಲಾಗಿದೆ ಎಂದು ಸಿಬಿಐ ಮೂಲಗಳು ಹೇಳಿದೆ.
ಜಗನ್ ಬಂಧನದ ಹಿಂದೆ ರಾಜಕೀಯ ತಂತ್ರ ಅಡಗಿರುವುದನ್ನು ಅಲ್ಲಗೆಳೆಯುವಂತಿಲ್ಲ. ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ ಬಂಧನವಾದರೆ ಕಾಂಗ್ರೆಸ್ ಪಕ್ಷದ ಶಾಸಕರು ಬಂಡಾಯ ಏಳುವ ಸಾಧ್ಯತೆಗಳಿದೆ.
ಆಂಧ್ರಪ್ರದೇಶದಲ್ಲಿ ಅಕಾಲಿಕ ಉಪ ಚುನಾವಣೆ ಎದುರಾಗುವ ಭೀತಿಯಿಂದ ತಪ್ಪಿಸಿಕೊಳ್ಳಲು ಕೇಂದ್ರದ ಕಾಂಗ್ರೆಸ್ ಸರ್ಕಾರ, ಜಗನ್ ಬಂಧನವನ್ನು ಮುಂದೂಡುತ್ತಾ ಬಂದಿದೆ. ಜಗನ್ ಬಂಧನದಿಂದ ರಾಜಕೀಯ ಲಾಭ ಪಡೆಯಲು ಎಲ್ಲಾ ಪಕ್ಷಗಳು ತಮಗೆ ತೋಚಿದ ತಂತ್ರಗಳನ್ನು ಹೆಣೆಯುತ್ತಿದ್ದಾರೆ.












Click it and Unblock the Notifications