ಕೀಚಕ ವಿಹಿಂಪ ಮುಖಂಡ: ಗೃಹಿಣಿ ಆತ್ಮಹತ್ಯೆಗೆ ಯತ್ನ

ದೂರಿನ ವಿವರ: ಹೆಜಮಾಡಿಯ ವಿಹಿಂಪ ಮುಖಂಡ ಕೇಶವ ಸುವರ್ಣ ಎಂಬಾತ ಗೃಹಿಣಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಬಾಧಿತ ಮಹಿಳೆಯ ಕುಟುಂಬ ಇಲ್ಲಿನ ಮಾರುತಿ ರಸ್ತೆಯ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದರು. ಸದರಿ ಗೃಹಿಣಿಯು ಬ್ಯೂಟಿಷಿಯನ್ ಆಗಿದ್ದಾರೆ. ಈಕೆ ಕೇಶವನ ಫ್ಯಾನ್ಸಿ ಅಂಗಡಿಯಿಂದ ಬ್ಯೂಟಿಪಾರ್ಲರ್‌ಗೆ ಬೇಕಾದ ವಸ್ತುಗಳನ್ನು ಖರೀದಿಸುತ್ತಿದ್ದರು. ಕೇಶವ ಈಕೆಯ ಮೊಬೈಲ್ ನಂಬರ್‌ಗೆ ಕರೆ ಮಾಡಿ ಅಶ್ಲೀಲವಾಗಿ ಮಾತನಾಡಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
ಅಲ್ಲದೆ ಈತನ ಸ್ನೇಹಿತನೂ ಬೇರೊಂದು ಮೊಬೈಲಿನಿಂದ ಕರೆ ಮಾಡಿ ಈಕೆಗೆ ಕಿರುಕುಳ ನೀಡುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ವಿಷಯವನ್ನು ಗಂಡನಿಗೆ ಹೇಳಿದಲ್ಲಿ ಆತನನ್ನು ಜೀವಸಹಿತ ಬಿಡುವುದಿಲ್ಲ ಎಂದು ಕೊಲೆ ಬೆದರಿಕೆಯನ್ನೂ ಒಡ್ಡಿದ್ದರು ಎನ್ನಲಾಗಿದೆ.
ಮನನೊಂದ ಮಹಿಳೆ ಸೋಮವಾರ ಸಂಜೆ ಮನೆಯಲ್ಲಿ ನಿದ್ರೆ ಮಾತ್ರೆ ಸೇವಿಸಿ ಅಸ್ವಸ್ಥಗೊಂಡಿದ್ದರು. ಆಕೆಯ ಪತಿ ಮನೆಗೆ ವಾಪಸಾದಾಗ ಅಸ್ವಸ್ಥಗೊಂಡ ಪತ್ನಿಯನ್ನು ಕಂಡು ಮುಲ್ಕಿಯ ಆಸ್ಪತ್ರೆಗೆ ಸೇರಿಸಿದ್ದಾರೆ. ಪೊಲೀಸರು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.
ಆರೋಪಿ ಕೇಶವ ವಿವಾಹಿತನಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಫ್ಯಾನ್ಸಿ ಅಂಗಡಿ ನಡೆಸುತ್ತಿದ್ದ ಈತ ಹೆಜಮಾಡಿ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷನಾಗಿದ್ದನು. ಈತನ ಈ ಕೃತ್ಯ ವ್ಯಾಪಕ ಖಂಡನೆಗೆ ಗುರಿಯಾಗಿದೆ.












Click it and Unblock the Notifications