ಹೀಗೂ ಉಂಟೆ:ರಬ್ಬಾನಿಗೆ ಸಿಂದನೂರಿನವ ಕಾಲ್ ಕೊಟ್ಟಿಲ್ಲ
ಇಸ್ಲಾಮಾಬಾದ್,
ಫೆ 14: ಇತ್ತ ನಮ್ಮ ಹುಡುಗ ಮಹಾಪರಾಧ ಮಾಡಿಬಿಟ್ಟಿದ್ದಾನೆಂದು ಕರ್ನಾಟಕ ಪೊಲೀಸರು ರಾಯಚೂರಿನ ಅಮರೇಶನ ಮೇಲೆ ಮುಗಿಬಿದ್ದಿರುವಾಗಲೇ ... ಫೋನ್ ಸ್ವೀಕರಿಸಿದ ರಿಸೀವರ್ ಎಂಡ್ ನಿಂದ ಛೆ ಎಲ್ಲಾದರೂ ಉಂಟೆ ಹಂಗೆಲ್ಲ ನನಗ್ಯಾರು ಫೋನೇ ಮಾಡಿಲ್ಲ ಎಂದು ಪಾಕ್ ವಿದೇಶಾಂಗ ವ್ಯವಹಾರಗಳ ಸಚಿವೆ ಹೀನಾ ರಬ್ಟಾನಿ ಖಾರ್ ಸ್ಪಷ್ಟನೆ ನೀಡಿದ್ದಾರೆ. ಇದನ್ನು ಕೇಳಿ ರಾಯಚೂರು ಪೊಲೀಸರು ಹೀಗೂ ಉಂಟೆ? ಎಂದು ನಿಟ್ಟುಸಿರು ಬಿಟ್ಟಿದ್ದಾರೆ. id="toptextpromo">ವಿಷಯ
ಏನಪಾ ಅಂದರೆ ರಬ್ಬಾನಿ ಮೇಡಂ ಮೊಬೈಲಿಗೆ ಕರ್ನಾಟಕದ ಯುವಕನೊಬ್ಬನಿಂದ ಬೈಗುಳದ ಕರೆ ಬಂದಿದೆಯೆಂಬ ವರದಿಗಳನ್ನು ಪಾಕಿಸ್ತಾನ 'ಹುರುಳಿಲ್ಲದ್ದು' ಎಂಬುದಾಗಿ ತಿರಸ್ಕರಿಸಿದೆ. id='are-slot-1' class='oiad oi-axt oiadv'> id='top-searched-articles'>'ರಬ್ಬಾನಿ
ಮೇಡಂಗೆ ಯಾವುದೇ ಕರೆ ಬಂದಿಲ್ಲ. ಮಾಧ್ಯಮ ವರದಿಗಳು ನಿರಾಧಾರದ್ದು' ಎಂದು ವಿದೇಶಾಂಗ ಕಚೇರಿ ವಕ್ತಾರ ಅಬ್ದುಲ್ ಬಾಸಿತ್ ಸೋಮವಾರ ಹೇಳಿದ್ದಾರೆ. ಮೇಡಂಗೆ 15 ನಿಮಿಷಗಳ ಬೈಗುಳದ ಕರೆ ಬಂದಿತ್ತು ಎಂಬ ವರದಿಗಳನ್ನು 'ಸಂಪೂರ್ಣ ನಿರಾಧಾರ' ಎಂದವರು ಹೇಳಿದ್ದಾರೆ.











Click it and Unblock the Notifications