ಎಮ್ಮಾರ್ ಜುಜುಬಿ ಹಗರಣ: ಜೇಠ್ಮಲಾನಿ
ಹೈದರಾಬಾದ್,
ಫೆ. 14: ಎಮ್ಮಾರ್ ಟೌನ್‌ಶಿಪ್ ವಂಚನೆ ಒಂದು ಜುಜುಬಿ ಹಗರಣ. ಅದಕ್ಕಿಂತ 2ಜಿ ಹಗರಣ ಭಯಂಕರವಾಗಿದೆ' ಎಂದು ಖ್ಯಾತ ಕ್ರಿಮಿನಲ್ ನ್ಯಾಯವಾದಿ ಬಿಜೆಪಿ ನೇತಾರ ರಾಮ್ ಜೇಠ್ಮಲಾನಿ ವಾದಿಸಿದ್ದಾರೆ. ಪ್ರಕರಣದಲ್ಲಿ ಸಿಬಿಐಗೆ ಮಾಫಿ ಸಾಕ್ಷಿಯಾಗಲು ಹವಣಿಸುತ್ತಿರುವ ಪ್ರಕರಣದ ಆರೋಪಿ, ದಲ್ಲಾಳಿ ಕೋನೇರು ಪ್ರಸಾದ್ ಪರ ನಾಂಪಲ್ಲಿ ಸಿಬಿಐ ಕೋರ್ಟಿನಲ್ಲಿ ಸೋಮವಾರ ಅವರು ವಾದ ಮಂಡಿಸಿದರು. id="toptextpromo">ಆರೋಪಿ
ಕೋನೇರು ಪ್ರಸಾದ್ ಸಲ್ಲಿಸಿರುವ ಜಾಮೀನು ಅರ್ಜಿಯ ಪರ ವಾದಿಸಿದ ಜೇಠ್ಮಲಾನಿ, ನನ್ನ ಕಕ್ಷಿದಾರರು ನ್ಯಾಯದ ಕಟಕಟೆಯಿಂದ ಪಾರಾಗುವುದಿಲ್ಲ. ಅವರು ವಿಚಾರಣೆಯಿಂದ ನುಣುಚಿಕೊಳ್ಳುವುದಿಲ್ಲ ಎಂಬ ಖಾತ್ರಿಯಿರುವವರೆಗೂ ಅವರಿಗೆ ಜಾಮೀನು ನಿರಾಕರಿಸುವುದು ಸಾಧುವಲ್ಲ ಎಂದು ಕೋರ್ಟ್ ಗಮನ ಸೆಳೆದರು. 2ಜಿ ಹಗರಣದ ಆರೋಪಿಗಳಿಗೇ ಜಾಮೀನು ಸಿಕ್ಕಿರುವಾಗ ಜುಜುಬಿ ಎಮ್ಮಾರ್ ಟೌನ್‌ಶಿಪ್ ಹಗರಣದಲ್ಲಿ ಜಾಮೀನು ಏಕೆ ಕೊಡಬಾರದು' ಎಂದು ಅವರು ಪ್ರಶ್ನಿಸಿದರು. id='are-slot-1' class='oiad oi-axt oiadv'> id='top-searched-articles'>ಜೇಠ್ಮಲಾನಿ
ವಾದ ಆಲಿಸಿದ ಕೋರ್ಟ್ ಶುಕ್ರವಾರ ತೀರ್ಪು ನೀಡುವುದಾಗಿ ಹೇಳಿತು.











Click it and Unblock the Notifications