ಶೋಕಾಸ್ ನೋಟೀಸಿಗೆ ಬಾರದ ಕಳಂಕಿತರ ಉತ್ತರ

ಈ ಕುರಿತಂತೆ ಕಳಂಕಿತರಾಗಿರುವ ಲಕ್ಷ್ಮಣ ಸವದಿ, ಸಿಸಿ ಪಾಟೀಲ್ ಮತ್ತು ಕೃಷ್ಣ ಜೆ ಪಾಲೇಮಾರ್ ಅವರು ವಿಧಾನಸಭೆಯ ಕಾರ್ಯಾಲಯಕ್ಕೆ ಸೋಮವಾರ ಪತ್ರ ಬರೆದು ಉತ್ತರಿಸಲು ವಾರ ಸಮಯ ನೀಡಬೇಕು ಎಂದಿದ್ದಾರೆ. ಅವರಿಗೆ ಇಂದೇ ಉತ್ತರ ನೀಡಬೇಕೆಂದು ಬೋಪಯ್ಯ ತಾಕೀತುಪಡಿಸಿದ್ದರು.
ವಿಧಾನಸಭೆಯ ಕಾರ್ಯದರ್ಶಿ ಪಿ. ಓಂಪ್ರಕಾಶ್ ಅವರು ಪತ್ರ ಬಂದಿರುವುದನ್ನು ದೃಢಪಡಿಸಿದ್ದು, ಮಡಿಕೇರಿಗೆ ತೆರಳಿರುವ ಕೆ.ಜಿ. ಬೋಪಯ್ಯ ಅವರು ಮರಳಿ ಬಂದನಂತರ ಪತ್ರವನ್ನು ಅವರ ಗಮನಕ್ಕೆ ತರುವುದಾಗಿ ಮಾಧ್ಯಮಕ್ಕೆ ತಿಳಿಸಿದರು.
ಮೂವರು ಶಾಸಕರಿಂದ ಉತ್ತರ ಬಂದ ನಂತರ ನಾಲ್ವರು ಬಿಜೆಪಿ, ಇಬ್ಬರು ಕಾಂಗ್ರೆಸ್ ಮತ್ತು ಓರ್ವ ಜೆಡಿಎಸ್ ಸದಸ್ಯರಿರುವ ಸಮಿತಿಗೆ ಅದನ್ನು ಒದಗಿಸಲಾಗುವುದು. ಸಮಿತಿ ವಿಚಾರಣೆ ನಡೆಸಿ ಮಾರ್ಚ್ 12ರೊಳಗಾಗಿ ಅಶ್ಲೀಲ ಚಿತ್ರ ನೋಡಿದ ಘಟನೆಗೆ ಸಂಬಂಧಿಸಿದಂತೆ ವರದಿ ನೀಡಲಿದೆ.
ಆದರೆ, ವಿರೋಧ ಪಕ್ಷಗಳು ಕ್ಯಾತೆ ತೆಗೆದಿದ್ದು, ಸಮಿತಿ ರಚಿಸುವ ಅವಶ್ಯಕತೆಯಿಲ್ಲ, ಎಲ್ಲ ಮೂವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕೆಂದು ದುಂಬಾಲುಬಿದ್ದಿವೆ. ಈ ಮನವಿಯನ್ನು ತಿರಸ್ಕರಿಸಿರುವ ಬೋಪಯ್ಯ, ಮೂವರು ಶಾಸಕರು ವಿಚಾರಣೆಗೆ ಒಳಗಾಗಲು ಅವಕಾಶ ನೀಡಬೇಕು ಎಂದಿದ್ದಾರೆ.












Click it and Unblock the Notifications