ಬೆಂಗಳೂರು, ಫೆ.13: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (BIAL) ಹೋಗುವ ಮಾರ್ಗದಲ್ಲಿ ಚಿಕ್ಕಜಾಲ ಸಮೀಪ ಸಾದರಹಳ್ಳಿ ಗೇಟಿನ ಬಳಿ ದುಬಾರಿ ಟೋಲ್ ಪಾವತಿ ಕಡ್ಡಾಯಗೊಳಿಸಿರುವುದನ್ನು ವಿರೋಧಿಸಿ, ಲಾರಿ ಚಾಲಕರು ದಿಢೀರ್ ಮುಷ್ಕರ ನಡೆಸಿದ್ದಾರೆ. ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ನೇತೃತ್ವದಲ್ಲಿ ಸೋಮವಾರ ಬೆಳಗ್ಗೆ ಪ್ರತಿಭಟನೆ ನಡೆಸಿದ್ದಾರೆ.
ಅನುಮತಿಯಿಲ್ಲದೆ ಮುಷ್ಕರಕ್ಕಿಳಿದ 76 ಲಾರಿ ಚಾಲಕರನ್ನು ಪೊಲೀಸರು ಬಂಧಿಸಿದ್ದಾರೆ. ಸ್ಥಳಕ್ಕೆ ಬೆಂಗಳೂರು ಆಗ್ನೇಯ ವಲಯ ಡಿಸಿಪಿ ರವಿಕಾಂತೇ ಗೌಡ ದೌಡಾಯಿಸಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದಾರೆ.
Heavy toll at the Sadarhalli Gate on the way to BIAL, the lorry owners resorted to stike on Feb 13. Bangalore police (South-East) police have arrested the strikers.