ದಾವಣಗೆರೆ: 2ನೇ ವಿವಾಹವಾದ ಟೆಕ್ಕಿಗೆ ಬಿತ್ತು ಗೂಸಾ
ದಾವಣಗೆರೆ,
ಫೆ 13: ವರದಕ್ಷಿಣೆಯ ಆಸೆಗೆ ಬಿದ್ದು ಎರಡನೆಯ ವಿವಾಹವಾಗುತ್ತಿದ್ದ ತಾಲೂಕಿನ ಬಟ್ಲಕಟ್ಟೆಯ ಸಾಫ್ಟ್ ವೇರ್ ಇಂಜಿನಿಯರ್ ರಘುರಾಂನನ್ನು ಮೊದಲ ಪತ್ನಿ ಸಂಬಂಧಿಕರು ಬೆಂಡ್ ಎತ್ತಿ, ಭಾನುವಾರ ಪೊಲೀಸರಿಗೆ ಒಪ್ಪಿಸಿದ್ದಾರೆ. id="toptextpromo">ಬೆಂಗಳೂರಿನ
ಪ್ರತಿಷ್ಠಿತ ಕಂಪನಿಯೊಂದರ ಈ ಟೆಕ್ಕಿ, 5 ವರ್ಷ ಹಿಂದೆ ತನ್ನ ಸಹೋದ್ಯೋಗಿ ದೇವಿಕಾರನ್ನು ಮದ್ವೆಯಾಗಿದ್ದ. ಆದರೆ ರಘುರಾಮ ಮತ್ತೊಬ್ಬ ಹುಡುಗಿಯ ಜತೆ 15 ಎಕರೆ ಜಮೀನು, 75 ತೊಲ ಚಿನ್ನವನ್ನು ವರದಕ್ಷಿಣೆಯಾಗಿ ಪಡೆದು ನಗರದ ಪೂಜಾ ಇಂಟರ್ ನ್ಯಾಷನಲ್ ಹೋಟೆಲ್ ಸಭಾಂಗಣದಲ್ಲಿ ವಿವಾಹವಾಗಲು ಸನ್ನದ್ದನಾಗಿದ್ದ. ಆದರೆ ಅನುಮಾನ ಬಂದು ಮೊದಲ ಪತ್ನಿ ಕಡೆಯವರು ನವ ವಧುವಿನ ಕಡೆಯವರಿಗೆ ಕರೆ ಮಾಡಿ, ವಿಚಾರಿಸಿದಾಗ ರಘುರಾಮನ ವಂಚನೆ ಬಯಲಾಗಿದೆ. id='are-slot-1' class='oiad oi-axt oiadv'> id='top-searched-articles'>ತಕ್ಷಣ
ತಂದೆ-ತಾಯಿ, ಬಂಧು-ಬಳಗ ಸಮೇತ ಕಂಕುಳಲ್ಲಿ ಒಂದು ವರ್ಷದ ಮಗುವನ್ನು ಅವಚಿಕೊಂಡು ದಾವಣಗೆರೆಯತ್ತ ಓಟಕಿತ್ತ ದೇವಿಕಾ, ಮದುವೆ ನಿಲ್ಲಿಸಿದರು ಅನ್ನಿ. ರಘು ಜತೆ ಅಗ್ನಿ ಸಾಕ್ಷಿಯಾಗಿ ಮಾದುವೆಯಾಗಿದ್ದಕ್ಕೆ ವಿಡಿಯೋ, ಫೋಟೊ ಆಲ್ಬಂ ತೋರಿಸಿದರು. ಇದನ್ನೆಲ್ಲ ನೋಡಿ ದಂಗಾದ ನೂತನ ವಧು ಕಡೆಯವರು ಪೂಜಾ ಇಂಟರ್ ನ್ಯಾಷನಲ್ ಹೋಟೆಲಿನಲ್ಲೇ ರಘುಗೆ ಪೂಜೆ ಮಾಡಿದರು. ದೇವಿಕಾ ಕಡೆಯವರೂ ಇದಕ್ಕೆ ಕೈ ಜೋಡಿಸಿದರು. ರಘುರಾಂ ಈಗ ಪೊಲೀಸರ ಅತಿಥಿಯಾಗಿದ್ದಾನೆ. ದಾವಣಗೆರೆ ಮತ್ತು ಡಾವಣಗೇರಿಯಿಂದಾಚೆಗೆ ಇದು ದೊಡ್ಡ ಸುದ್ದಿ.











Click it and Unblock the Notifications